ಬೆಂಗಳೂರು: ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಗದಗ (Gadag) ಕೆಆರ್ಐಡಿಎಲ್ನ ಎಇಇ ಫರ್ವೀಜ್ ಹೈದರಾಬಾದ್ನಲ್ಲಿ ಪತ್ತೆಯಾಗಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಎಇಇ ಫರ್ವೀಜ್ ಅವರ ಲೊಕೇಷನ್ ಹೈದರಾಬಾದ್ನಲ್ಲಿ ಟ್ರೇಸ್ ಆಗಿದೆ. ಸದ್ಯದಲ್ಲೇ ಪೊಲೀಸರು ಅವರನ್ನು ಕರೆತರಲಿದ್ದಾರೆ ಎಂದು ಹೇಳಿದ್ದಾರೆ.
ಫರ್ವೀಜ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅವರ ವೈಯಕ್ತಿಕ ವಿಚಾರದಲ್ಲಿ ಏನೋ ಸಮಸ್ಯೆ ಇದೆ ಎಂದು ತಮಗೆ ಮಾಹಿತಿ ಬಂದಿದೆ. ಈ ಹಿಂದೆ ಕೂಡ ಅವರು ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಹಿಂದಿನ ಬಾರಿಯೂ ಅಜ್ಮೀರ್ನಿಂದ ಪೊಲೀಸರು ಅವರನ್ನು ಪತ್ತೆಹಚ್ಚಿ ಕರೆತಂದಿದ್ದರು ಎಂದು ತಿಳಿಸಿದ್ದಾರೆ.
ಇನ್ನು ಫರ್ವೀಜ್ ಅವರು ಕೆಲಸ ನಿರ್ವಹಿಸುತ್ತಿದ್ದ ರೀತಿಯ ಬಗ್ಗೆಯೂ ದೂರುಗಳು ಬಂದಿವೆ ಎಂದು ಸಿಎಂ ಹೇಳಿದ್ದಾರೆ. ಗದಗದ ನಾಯಕ್ ಎಂಬುವವರು ಅವರ ವಿರುದ್ಧ ಎರಡ್ಮೂರು ಬಾರಿ ದೂರು ನೀಡಿದ್ದಾರೆ. ಎಇಇ ಕಾನೂನು ಪ್ರಕಾರ ಕೆಲಸ ಮಾಡುತ್ತಿರಲಿಲ್ಲ, ಸೈಟ್ಗಳಿಗೆ ವಿಸಿಟ್ ಮಾಡುತ್ತಿರಲಿಲ್ಲ ಎಂಬ ಆರೋಪಗಳಿವೆ ಎಂದು ತಿಳಿಸಿದ್ದಾರೆ.
ಕೆಲಸದ ಸ್ಥಳಗಳ ವೀಕ್ಷಣೆಯ ವಿಡಿಯೋ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದ್ದು, ಇದಕ್ಕೆ ಫರ್ವೀಜ್ ಸಹಕಾರ ನೀಡಿರಲಿಲ್ಲ ಎಂದು ಸಿಎಂ ಹೇಳಿದ್ದಾರೆ. ಈ ಬಗ್ಗೆ ಶಾಸಕರೂ ಕೂಡ ಸಂಪೂರ್ಣ ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಮೇಲಧಿಕಾರಿಗಳು ಪ್ರಶ್ನೆ ಮಾಡುವುದು ಸಹಜ. ಹೀಗಾಗಿ ಈ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಯಬೇಕು ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ – ಮನೆಯವರ ಮುಂದೆ ಪ್ರಶ್ನೆಗಳ ಸುರಿಮಳೆ
ಸದ್ಯ ಫರ್ವೀಜ್ ಅವರ ಲೊಕೇಷನ್ ಹೈದರಾಬಾದ್ನಲ್ಲಿ ಟ್ರೇಸ್ ಆಗಿದ್ದು, ಪೊಲೀಸರು ಅವರನ್ನು ಕರೆತರುವ ಕಾರ್ಯ ಮುಂದುವರಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಚಿತ್ರರಂಗದಲ್ಲಿ ಕಿಚ್ಚನಿಗೆ 30 ವರ್ಷಗಳ ಸಂಭ್ರಮ: ಬಿಗ್ಬಾಸ್ ವೇದಿಕೆಯಲ್ಲಿ ದಿಗ್ಗಜರಿಂದ ಅಭಿನಂದನೆ

