CrimeLatestMain PostNational

ಕಾರ್ಖಾನೆಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ

ಕೋಲ್ಕತ್ತಾ: ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಪಶ್ಚಿಮ ಬಂಗಾಳದ ಹಬೀಬ್‍ಪುರದಲ್ಲಿ ನಡೆದಿದೆ.

4ನೇ ತರಗತಿಯನ್ನು ಓದುತ್ತಿರುವ ವಿದ್ಯಾರ್ಥಿನಿಯ ಮೇಲೆ ನಿಮಾಯ್ ಬಿಸ್ವಾಸ್ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಬಾಲಕಿಯ ಕುಟುಂಬಸ್ಥರು ದಿನಗೂಲಿ ನೌಕರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ನಿಮಾಯ್ ಬಿಸ್ವಾಸ್ ಬಾಲಕಿಯನ್ನು ಬಲವಂತವಾಗಿ ಪೊರಕೆ ಕಾರ್ಖಾನೆಗೆ ಕರೆದೊಯ್ದಿದ್ದಾನೆ.

ನಂತರ ಅಲ್ಲಿ ಅವಳಿಗೆ ಬಿಸ್ಕೆಟ್ ನೀಡುವುದಾಗಿ ಆಸೆ ತೋರಿಸಿದ್ದಾನೆ. ಇದಾದ ನಂತರ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಿ ಬಾಲಕಿಯು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಮೊದಲ ತಲೆದಂಡ- ಕೆಎಎಸ್ ಅಧಿಕಾರಿ ಅಮಾನತು

ನಂತರ ಘಟನೆ ಬಗ್ಗೆ ಬಾಲಕಿಯು ತನ್ನ ಪೊಷಕರಿಗೆ ವಿವರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬಸ್ಥರು ನಿಮಾಯ್ ಬಿಸ್ವಾಸ್ ವಿರುದ್ಧ ಹಬೀಬ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈವರೆಗೂ ಆರೋಪಿಯನ್ನು ಬಂಧಿಸಿಲ್ಲ. ಆದರೆ ಆತನ ವಿರುದ್ಧ ತನಿಖೆ ಆರಂಭಿಸಲಾಗಿದೆ. ಇದನ್ನೂ ಓದಿ: ಮದುವೆ ಮನೆ ಗೋಡೆ ಕುಸಿದು 5 ವರ್ಷದ ಮಗು ಸೇರಿ ಮೂವರು ದುರ್ಮರಣ

Leave a Reply

Your email address will not be published.

Back to top button