* 2 ತಿಂಗಳು ಅಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ನೌಕರರಿಂದ ಮುಷ್ಕರ
* ಎಲ್ಲಾ ಸರಿಪಡಿಸೋ ವರೆಗೆ ನೀವೆ ವ್ಯವಸ್ಥೆ ಮಾಡಿಕೊಳ್ಳಿ ಅಂತ ಸಚಿವರ ಉಡಾಫೆ ಹೇಳಿಕೆ
ಬೆಂಗಳೂರು: 108 ಸೇವೆ ಮೇಲೆ ಅವಲಂಬನೆ ಆಗಬೇಡಿ. ನೀವೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ (U.T.Khader) ಹೇಳಿದ್ದಾರೆ.
ಎರಡು ತಿಂಗಳು ಅಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿದ ಯು.ಟಿ.ಖಾದರ್, 108 ಅಂಬುಲೆನ್ಸ್ ಮೇಲೆ ಅವಲಂಬನೆ ಆಗಬೇಡಿ. ಎರಡು ತಿಂಗಳು ಕಾಲ ಅಂಬುಲೆನ್ಸ್ ಮೇಲಿನ ಅವಲಂಬನೆ ತಪ್ಪಿಸಿ. ನಾವು ವ್ಯವಸ್ಥೆ ಸರಿ ಮಾಡುತ್ತಿದ್ದೇವೆ. ಹೊಸ ಅಂಬುಲೆನ್ಸ್ ಖರೀದಿ ಮಾಡಿ ಸಮಸ್ಯೆ ಸರಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೆರಿಟ್ ಅಭ್ಯರ್ಥಿಗಳಿಂದಲೂ ಹಣ ಪೀಕಿದ ಕೆಪಿಎಸ್‌ಸಿ ಗ್ಯಾಂಗ್!
ಅಂಬುಲೆನ್ಸ್ ಶಾರ್ಟೇಜ್ ಇದೆ. ನಾವು ಖರೀದಿ ಮಾಡುತ್ತೇವೆ. ಅಲ್ಲಿವರೆಗೆ ನೀವೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಚಿವರು ಅಂಬುಲೆನ್ಸ್ ಸೇವೆ ಬಗ್ಗೆ ಉಡಾಫೆ ಹೇಳಿಕೆ ನೀಡಿದ್ದಾರೆ.
ಅಂಬುಲೆನ್ಸ್ ನೌಕರರ ಬ್ಲ್ಯಾಕ್‌ಮೇಲ್‌ಗೆ ನಾನು ಬಗ್ಗಲ್ಲ. ಇವರ ದಬ್ಬಾಳಿಕೆಗೆ ನಾನು ಬಗ್ಗಲ್ಲ. ರೋಗಿಗಳಿಗೆ ತೊಂದರೆ ಆದರೆ ಕಂಪನಿಗಳೇ ಹೊಣೆ. ಮೂರು ತಿಂಗಳಿಗೊಮ್ಮೆ ಬಂದು ಮುಷ್ಕರ ಅಂದರೆ ಏನು ಅರ್ಥ? ನಾನು ಇವರ ಬ್ಲ್ಯಾಕ್‌ಮೇಲ್‌ಗೆ ಬಗ್ಗಲ್ಲ ಎಂದು ಮಾತನಾಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಚರ್ಚೆ ದುರಾದೃಷ್ಟಕರ: ಕೋಟಾ ಶ್ರೀನಿವಾಸ ಪೂಜಾರಿ

