ಬೆಂಗಳೂರು: ನಗರದಲ್ಲಿ (Bengaluru) ಫುಟ್ ಪಾತ್ (Footpath) ಒತ್ತುವರಿ ತೆರವಿಗೆ ಜಿಬಿಎ (GBA) ಮುಂದಾಗಿದೆ. ನಗರದ 2000 ಕಿಲೋ ಮೀಟರ್ ರಸ್ತೆಯನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ಸುರಕ್ಷಿತ ಪಾದಾಚಾರಿ ಅಭಿಯಾನ ನಡೆಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಕೈಗೆತ್ತಿಕೊಂಡಿದ್ದಾರೆ.
ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಯಾರೆಲ್ಲ ಒತ್ತುವರಿ ಮಾಡಿಕೊಂಡಿದ್ದಾರೋ ಅವರು ಫುಟ್ ಪಾತ್ ತೆರವುಗೊಳಿಸಲು ಜುಲೈ 1 ರವರೆಗೆ ಗಡುವು ನೀಡಲಾಗಿದೆ.
ಸಚಿವರು ಘೋಷಿಸಿದ ಹೊಸ ರೂಲ್ಸ್
* ಜುಲೈ 1ರ ನಂತರ ಫುಟ್ ಪಾತ್ ಒತ್ತುವರಿ ತೆರವುಗೊಳಿಸದೇ ಇದ್ದರೆ 250-10,000 ರೂ. ವರೆಗೂ ಭಾರೀ ದಂಡ.
* ಫುಟ್ ಪಾತ್ ಮೇಲೆ ಜಾಹೀರಾತು ಬೋರ್ಡ್ ಇಟ್ಟರೆ ದಂಡ.
* ಅಂಗಡಿಗಳು ಒತ್ತುವರಿ ಮಾಡಿದ್ದರೆ ಆ ಅಂಗಡಿಗಳ ಪರವಾನಿಗೆ ರದ್ದು ಮಾಡಬಹುದು.
* ಪಾದಚಾರಿ ಮಾರ್ಗದಲ್ಲಿ ವಾಹನಗಳ ಪಾರ್ಕಿಂಗ್ ಮಾಡೋ ಹಾಗಿಲ್ಲ.
* ಫುಟ್ ಪಾತ್‌ನಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಬೇಕಾಗುತ್ತದೆ.
* ರಸ್ತೆ ಬದಿ, ಫುಟ್ ಪಾತ್‌ನಲ್ಲಿ ವಾರಸುದಾರರಿಲ್ಲದ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಜುಲೈ 1 ರಿಂದ ಬಿಡಾಡಿ ವಾಹನಗಳ ಮೇಲೆ ಸ್ಟಿಕರ್ ಅಂಟಿಸಿ ನೋಟಿಸ್ ನೀಡಲಾಗುತ್ತದೆ.
* ಜುಲೈ10 ರಿಂದ ಈ ಬಿಡಾಡಿ ವಾಹನಗಳನ್ನು ತೆರವುಗೊಳಿಸದೇ ಇದ್ದರೆ ಕ್ರಮಕೈಗೊಂಡು ಹರಾಜು ಹಾಕಲಾಗುವುದು.
* ಸಿಗ್ನಲ್‌ನಿಂದ 75 ಮೀಟರ್ ದೂರದಲ್ಲಿ ಬಸ್ ನಿಲುಗಡೆ ಇರಬಾರದು ಎಂಬ ನಿಯಮಗಳನ್ನು ಸಚಿವರು ಘೋಷಿಸಿದ್ದಾರೆ.
