Bengaluru CityCinemaKarnatakaLatestMain PostSandalwood

ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಪ್ರೇರಣಾ ಧ್ರುವ ಸರ್ಜಾ(Prerana sarja) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಆಗಮನದ ಖುಷಿಯಲ್ಲಿರುವ ಮೇಘನಾ ರಾಜ್ ಮುದ್ದು ಮಗಳ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಮನೆಯಲ್ಲಿ ಆಗಲೇ ಮಗನಿದ್ದಾನೆ. ಮಗಳು ಬಂದಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ.

ಗಾಂಧಿ ಜಯಂತಿ ದಿನ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿರುವ ಪ್ರೇರಣಾನ ನೋಡಲು ಮೇಘನಾ ರಾಜ್ (Meghana Raj) ಕೆ.ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಂಗಿ ಮತ್ತು ಮಗಳನ್ನು ನೋಡಲು ಬಂದಿರುವ ಮೇಘನಾ, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮನೆಯವರೆಲ್ಲಾ ಇದ್ದಾರೆ. ಮಗನಾಗಿ ರಾಯನ್ (Rayan)  ಆಗಲೇ ಇದ್ದಾನೆ ಮಗಳು ಬಂದಿರುವುದಕ್ಕೆ ಖುಷಿ ಇದೆ ಎಂದು ಮೇಘನಾ ರಾಜ್ ಈ ವೇಳೆ ಮಾತನಾಡಿದ್ದಾರೆ. ಇದನ್ನೂ ಓದಿ:ಯುವ ರಾಜ್‌ಕುಮಾರ್ ಸಿನಿಮಾದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ

ಮನೆಗೆ ಹೆಣ್ಣು ಮಗು ಬೇಕು ಎಂಬುದು ಧ್ರುವಾ ಆಸೆಯಾಗಿತ್ತು. ಅದರಂತೆಯೇ ಮಗಳ ಆಗಮನವಾಗಿರುವುದು ಧ್ರುವಗೆ ಖುಷಿ ಕೊಟ್ಟಿದೆ. ಧ್ರುವ ತುಂಬಾ ಖುಷಿಯಲ್ಲಿ ತೇಲುತ್ತಿದ್ದಾರೆ ಎಂದು ಈ ವೇಳೆ ಮೇಘನಾ ರಾಜ್ ಕೂಡ ಖುಷಿಯ ಕ್ಷಣವನ್ನ ಹಂಚಿಕೊಂಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button