ಚಿತ್ರರಂಗಕ್ಕೆ ಅಣ್ಣಾವ್ರ ಕುಟುಂಬದ ಕಲಾ ಸೇವೆ ಅಪಾರ. ಇದೀಗ ಶಿವಣ್ಣ, ಅಪ್ಪು, ರಾಘಣ್ಣ ನಂತರ ದೊಡ್ಮನೆಯಿಂದ ಒಬ್ಬಬ್ಬರೇ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಅಪ್ಪು ಅಗಲಿಕೆಯ ನಂತರ ಯುವ ರಾಜ್‌ಕುಮಾರ್ (Yuva Rajkumar) ಮೇಲೆ ಅಪಾರ ಅಭಿಮಾನ ಇಟ್ಟಿರುವ ಅಭಿಮಾನಿಗಳು ಯುವನ ಚೊಚ್ಚಲ ಚಿತ್ರಕ್ಕಾಗಿ ಕಾಯ್ತಿದ್ದಾರೆ.
ರಾಘವೇಂದ್ರ ರಾಜಕುಮಾರ್ (Raghavendra Rajkumar) ಅವರ ಪುತ್ರ ಯುವ ರಾಜ್‌ಕುಮಾರ್ `ರಣಧೀರ ಕಂಠೀರವ’ ನಾಗಿ ಈಗಾಗಲೇ ಫೀಲ್ಡ್ಗೆ ಇಳಿಯಬೇಕಿತ್ತು. ಕೆಲ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇದೀಗ ಹೊಂಬಾಳೆ ಬ್ಯಾನರ್ (Hombale Films) ಅಡಿ ಸಂತೋಷ್ ಆನಂದ್ ರಾಮ್ (Santhosh Anandram) ನಿರ್ದೇಶನದ ಚಿತ್ರದ ಮೂಲಕ ಯುವ ಎಂಟ್ರಿ ಕೊಡಲು ಸಕಲ ಸಿದ್ಧತೆ ಕೂಡ ನಡೆಸುತ್ತಿದ್ದಾರೆ. ಇದನ್ನೂ ಓದಿ:ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ- ಉಪೇಂದ್ರ
ನಿರ್ದೇಶಕ ಸಂತೋಷ್ ಆನಂದರಾಮ್, ಅಪ್ಪುಗಾಗಿ ಬರೆದ ಕಥೆಯಲ್ಲಿ ಯುವ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಅಸಲಿ ಕಥೆನೇ ಬೇರೆ, ಅಪ್ಪುಗೆ ಬರೆದ ಸ್ಟೋರಿ ಯುವ ಕಾಣಿಸಿಕೊಳ್ಳುತ್ತಿಲ್ಲ. ದೊಡ್ಮನೆ ಕುಡಿಗಾಗಿ ಬೇರೇ ಕಥೆಯನ್ನೇ ನಿರ್ದೇಶಕರು ಬರೆದಿದ್ದಾರೆ.
View this post on Instagram
ಸಾಕಷ್ಟು ಬಿಗ್ ಹಿಟ್ ಚಿತ್ರಗಳನ್ನ ಕೊಟ್ಟಿರುವ ಸಂತೋಷ್ ಆನಂದರಾಮ್ ನಿರ್ದೇಶನದ ʻರಾಘವೇಂದ್ರ ಸ್ಟೋರ್ಸ್ʼ (Raghavendra Stores) ರಿಲೀಸ್ ಆದ ಮೇಲೆ ದೊಡ್ಮನೆ ಕುಡಿ ಯುವಗೆ ಡೈರೆಕ್ಷನ್ ಮಾಡಲಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಯುವನನ್ನು ತೋರಿಸಲಿದ್ದಾರೆ. ಯುವ ರಾಜ್‌ಕುಮಾರ್ ಅವರಲ್ಲಿ ಅಪ್ಪುನ ಕಾಣುತ್ತಿರುವ ಅಭಿಮಾನಿಗಳ ನಿರೀಕ್ಷೆಯನ್ನ ಪೂರ್ಣಗೊಳಿಸುತ್ತಾರಾ ಕಾದುನೋಡಬೇಕಿದೆ.