ಬೆಂಗಳೂರು: ಮಂಗಳವಾರ ಪೊಲೀಸರ ಹಠಾತ್ ದಾಳಿಯಿಂದ ಮಧ್ಯಾಹ್ನ ಲಘು ಹೃದಯಾಘಾತವಾಗಿ ಕುಸಿದುಬಿದ್ದು ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸಸ್ಪತ್ರೆಗೆ ದಾಖಲಾಗಿದ್ದ ಅಗ್ನಿ ಶ್ರೀಧರ್‍ಗೆ ಚಿಕಿತ್ಸೆ ಮುಂದುವರಿಯುತ್ತಿದೆ.
ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಐಸಿಯುನಲ್ಲಿರು ಆರೋಪಿ ಅಗ್ನಿ ಶ್ರೀಧರ್‍ಗೆ ಹೃದ್ರೋಗ ತಜ್ಞ ಡಾ. ಕಿಶೋರ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಇಂದು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ಅಗ್ನಿ ಶ್ರೀಧರ್ ಬಂಧನವಾಗುವ ಸಾಧ್ಯತೆಯಿದೆ.
Advertisement
ರಾತ್ರಿಯಿಡಿ ಆಸ್ಪತ್ರೆ ಬಳಿ ಒಂದು ಕೆಎಸ್ ಆರ್ ಪಿ ತುಕಡಿ ಹಾಗೂ ಕುಮಾರಸ್ವಾಮಿ ಲೇಔಟ್ ಪೆÇಲೀಸರಿಂದ ಭದ್ರತೆಗೆ ನಿಯೋಜನೆಗೊಂಡಿದ್ದು, ವಾರ್ಡ್ ಬಳಿ ಎಂಟು ಜನ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Advertisement
ಚಂಪಾ ಭೇಟಿ: ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ ಅವರು ಸಾಗರ್ ಆಸ್ಪತ್ರೆಗೆ ಭೇಟಿ ನೀಡಿ ಅಗ್ನಿ ಶ್ರೀಧರ್ ಆರೋಗ್ಯ ವಿಚಾರಿಸಿದರು.
Advertisement
ಠಾಣೆಗೆ ಬಂದ ಹೊಟ್ಟೆ ಕೃಷ್ಣ: ಲೋಕಾಯುಕ್ತ ಡೀಲ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಹೊಟ್ಟೆ ಕೃಷ್ಣ ಆರೋಪಿ ಬಚ್ಚನ್ ನೋಡಲು ಕುಮಾರಸ್ವಾಮಿ ಲೇಔಟ್ ಠಾಣೆಗೆ ಆಗಮಿಸಿದ್ದ. ಬಚ್ಚನ್ ಅಕ್ಕನ ಮಗನಾಗಿರುವ ಬಿಬಿಎಂಪಿಯ ಬನಶಂಕರಿ ದೇಗುಲ ವಾರ್ಡ್ ಸದಸ್ಯ ಅನ್ಸರ್ ಪಾಷಾ ಕೂಡ ಬಚ್ಚನ್ ಯೋಗಕ್ಷೇಮ ವಿಚಾರಿಸಿದ್ರು..
Advertisement
ಪೊಲೀಸ್ ಕಸ್ಟಡಿಗೆ: ಕಾಂಗ್ರೆಸ್ ಮುಖಂಡ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ 10 ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.
ಬಂಧಿತ ಆರೋಪಿಗಳನ್ನು ಬುಧವಾರ 44 ನೇ ಎಸಿಎಂ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದರು. ಈ ವೇಳೆ ಕೋರ್ಟ್ ಫೆ.20ರವರೆಗೆ ಪೊಲೀಸ್ ಕಸ್ಟಡಿ ನೀಡಿ ಆದೇಶ ಪ್ರಕಟಿಸಿತು.
ಕೇಸ್ ವರ್ಗಾವಣೆ: ಅಗ್ನಿ ಶ್ರೀಧರ್ ಮನೆಯ ಮೇಲೆ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈಶಾನ್ಯ ವಿಭಾಗಕ್ಕೆ ಪ್ರಕರಣ ವರ್ಗಾವಣೆಯಾಗಿದ್ದು, ಸಂಪಿಗೆಹಳ್ಳಿ ಠಾಣೆಯ ಇನ್ಸ್‍ಪೆಕ್ಟರ್‍ಗೆ ತನಿಖೆ ಜವಾಬ್ದಾರಿ ವಹಿಸಿದ್ದಾರೆ.