ಕೇರಳ: ಕೇರಳದಿಂದ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಆರು ವರ್ಷದ ಬಾಲಕಿಯಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಲ್ಲಂ ಮೂಲದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತೆಂಕಾಸಿ ಮೂಲದ ಬಾಲಕಿ ತನ್ನ ಅಜ್ಜನೊಂದಿಗೆ ಕೇರಳದ ಎಡತುವಾ ಚರ್ಚ್‌ಗೆ ಬಂದಿದ್ದಳು. ಚರ್ಚ್‌ನಿಂದ ವಾಪಸ್ ಆಗುವಾಗ ಗುರುವಾರ ಮುಂಜಾನೆ ಪಲರುವಿ ಎಕ್ಸ್‌ಪ್ರೆಸ್ ರೈಲಿನಲ್ಲಿ ವಾಪಸ್ ಊರಿಗೆ ಹೊರಟಿದ್ದರು. ಜನರಲ್ ಕಂಪಾರ್ಟ್ಮೆಂಟ್‌ನಲ್ಲಿ ಬಾಲಕಿ ತನ್ನ ಅಜ್ಜನ ಪಕ್ಕದಲ್ಲೇ ಮಲಗಿದ್ದಳು. ಇದನ್ನೂ ಓದಿ: ಬೈಕ್ ಅಪಘಾತ ತಪ್ಪಿಸಲು ಹೋಗಿ ದೇವಸ್ಥಾನಕ್ಕೆ ಗುದ್ದಿದ ಬಿಎಂಟಿಸಿ ಬಸ್
ಬಾಲಕಿ ನಿದ್ರಿಸುತ್ತಿದ್ದನ್ನು ಗಮನಿಸಿದ ಆರೋಪಿ, ಆಕೆಯನ್ನು ಎತ್ತಿಕೊಂಡು ಹೋಗಿ ತನ್ನ ಸೀಟಿನ ಮೇಲೆ ಮಲಗಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಯ ಈ ನೀಚ ಕೃತ್ಯವನ್ನು ರೈಲಿನಲ್ಲಿದ್ದ ಮಹಿಳೆಯೊಬ್ಬರು ಗಮನಿಸಿದ್ದಾರೆ. ತಕ್ಷಣವೇ ವಿಡಿಯೋ ಮಾಡುವ ಮೂಲಕ, ರೈಲಿನಲ್ಲಿ ಕಿರುಚಾಡಿ ಎಲ್ಲರನ್ನೂ ಎಚ್ಚರಿಸಿದ್ದಾರೆ. ಅಷ್ಟರಲ್ಲೇ ರೈಲು ತಮಿಳುನಾಡಿನ ಗಡಿ ಪ್ರವೇಶಿಸಿದೆ. ಆರೋಪಿಯು ಸೆಂಗೊಟ್ಟೈ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದ.
ಮಹಿಳೆ ನೀಡಿದ ವಿಡಿಯೋ ಸಾಕ್ಷ್ಯ ಮತ್ತು ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪುನಲೂರು ರೈಲ್ವೆ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಪೋಕ್ಸೊ ಕೇಸ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಪಂದ್ಯ ವೀಕ್ಷಿಸಿ ಮನೆಗೆ ತೆರಳುತ್ತಿದ್ದಾಗ ಬೈಕ್‌ಗೆ ಕಾರು ಡಿಕ್ಕಿ – ಇಬ್ಬರು ಸಾವು

