Sunday, 19th May 2019

ಮಾತೆ ಮಹಾದೇವಿ ಲಿಂಗೈಕ್ಯ – 30 ವರ್ಷದ ಹಿಂದೆಯೇ ನಿರ್ಮಾಣವಾಗಿದೆ ಕಮಲ ಆಕಾರದ ಗದ್ದುಗೆ

ಬಾಗಲಕೋಟೆ: ಲಿಂಗೈಕ್ಯರಾಗಿರುವ ಮಾತೆ ಮಹಾದೇವಿ ಅವರನ್ನು ಈಗಾಗಲೇ ನಿರ್ಮಾಣವಾಗಿರುವ ಕಮಲದ ಆಕಾರದ ಗದ್ದುಗೆಯಲ್ಲಿ ಶನಿವಾರ ಸಮಾಧಿ ಮಾಡಲಾಗುತ್ತದೆ.

ಹುನಗುಂದ ತಾಲೂಕಿನ ಕೂಡಲಸಂಗಮದ ಅನುಭವಮಂಟಪದ ಬಳಿ 30 ವರ್ಷದ ಹಿಂದೆಯೇ ಈ ಸಮಾಧಿ ನಿರ್ಮಾಣವಾಗಿದೆ. ಈ ಹಿಂದೆ ಸಮಾಧಿ ಸ್ಥಳದಲ್ಲಿ ಲಿಂಗ ಆಕಾರದೊಳಗೆ ಅಕ್ಕಮಹಾದೇವಿ ಮೂರ್ತಿಯನ್ನು ಇಡಲಾಗಿತ್ತು. ಈಗ ಅಕ್ಕಮಹಾದೇವಿ ಮೂರ್ತಿ ತೆಗೆದು ಮಾತೆ ಮಹಾದೇವಿ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಗುವುದು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ:ಲಿಂಗಾಯತ ಧರ್ಮದ ಹೋರಾಟಗಾರ್ತಿ ಮಾತೆ ಮಹಾದೇವಿ ಲಿಂಗೈಕ್ಯ

ಕೂಡಲಸಂಗಮಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್, ಎಸ್‍ಪಿ ಸಿಬಿ ರಿಷ್ಯಂತ್ ಭೇಟಿ ನೀಡಿದ್ದು, ಸಮಾಧಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಹಾಗೆಯೇ ಅಂತಿಮ ದರ್ಶನದ ಸಮಯದಲ್ಲಿ ಬೇಕಾಗುವ ಭದ್ರತೆ ಕುರಿತು ಮಠದ ಸಿಬ್ಬಂದಿ ಜೊತೆ ಚರ್ಚೆ ನಡೆಸಿದ್ದಾರೆ.

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮಾತೆ ಮಹಾದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *