– ಪಂಜಾಬ್ ಮಾದರಿ ಟೋಲ್ ಸಂಗ್ರಹಕ್ಕೆ ಒತ್ತಾಯ
ಮಂಡ್ಯ: ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ (Toll Collection) ಸಂಗ್ರಹ ವಿರೋಧಿಸಿ ಮತ್ತು ರೈತರ ವಾಹನಗಳಿಗೆ ಟೋಲ್‌ನಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ, ಜೂನ್ 23 ರಂದು ರಾಜ್ಯಾದ್ಯಂತ ಟೋಲ್ ಬೂತ್‌ಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ (Karnataka State Farmers Union) ಕರೆ ನೀಡಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ ಎಂದು ಅಧ್ಯಕ್ಷ ಕುರುಬೂರು ಶಾಂತಕುಮಾರ್ (Kurubur Shantha Kumar) ತಿಳಿಸಿದ್ದಾರೆ. ಇದನ್ನೂ ಓದಿ: ಮರಳು ಗಣಿಗಾರಿಕೆ ವಿವಾದ – ಬಿಜೆಪಿ ನಾಯಕ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟು ಹತ್ಯೆ

ಕಬ್ಬು, ತರಕಾರಿ ಮತ್ತು ಹಣ್ಣುಗಳನ್ನು ಸಾಗಿಸುವ ಕೃಷಿ ವಾಹನಗಳ ಮೇಲೆ ಟೋಲ್ ವಿಧಿಸುವುದರಿಂದ ರೈತರ ಮೇಲೆ ತೀವ್ರ ಆರ್ಥಿಕ ಹೊರೆ ಬೀಳುತ್ತಿದೆ. ಕೂಡಲೇ ಇಂತಹ ವಾಹನಗಳಿಗೆ ಟೋಲ್ ಸುಂಕದಿಂದ ವಿನಾಯಿತಿ ನೀಡಬೇಕು. ವಾಹನ ಖರೀದಿ ಸಂದರ್ಭದಲ್ಲೇ ಮಾಲೀಕರು ರಸ್ತೆ ತೆರಿಗೆ ಪಾವತಿಸುತ್ತಾರೆ. ಹೀಗಿರುವಾಗ ಮತ್ತೆ ಟೋಲ್ ವಸೂಲಿ ಮಾಡುವುದು ಸರಿಯಲ್ಲ ಎಂದು ಆಗ್ರಹಿಸಿ, ರಾಜ್ಯದ ಎಲ್ಲಾ ಟೋಲ್‌ಗಳನ್ನ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೂ ಪಂಜಾಬ್‌ನಲ್ಲಿ ಅನುಸರಿಸುತ್ತಿರುವ ಸುಂಕ ವಸೂಲಿ ಮಾದರಿಯನ್ನ ಕರ್ನಾಟಕದಲ್ಲೂ ಜಾರಿಗೆ ತರಬೇಕು, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣ ತಕ್ಷಣ ಪಾವತಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅನುಮಾನ ಏನಿಲ್ಲ, ನಮ್ಮಪ್ಪ ಜೆಡಿಎಸ್‌ಗೆ ಮತ ಹಾಕಿದ್ದಾರೆ – ಪುತ್ರ ಹರೀಶ್ ಗೌಡ ವಿಶ್ವಾಸ
