– ಸಾರಿಗೆ ಬಸ್‌ಗಳಲ್ಲಿ ಸಾಮಾನ್ಯ ನಾಗರಿಕನಂತೆ ಪ್ರಯಾಣಿಸಿ ಪರಿಶೀಲಿಸಿದ ಸಚಿವ
ಬೆಂಗಳೂರು: ಮಾರುವೇಷ ಧರಿಸಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸಾರಿಗೆ ಬಸ್‌ಗಳಲ್ಲಿ ಚೆಕ್ಕಿಂಗ್ ಮಾಡಿದ್ದಾರೆ.
ಮುಖಕ್ಕೆ ಮಾಸ್ಕ್ ಧರಿಸಿ ಸಚಿವ ಬೈರತಿ ಸುರೇಶ್ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದ್ದಾರೆ. ಸಾಮಾನ್ಯ ಪ್ರಯಾಣಿಕನಂತೆ ಬಸ್ ಟಿಕೆಟ್ ಪಡೆದು ಪರಿಶೀಲಿಸಿದ್ದಾರೆ.
ಹಲವು ಸಾರಿಗೆ ಬಸ್‌ಗಳನ್ನು ಹತ್ತಿ ಸಾಮಾನ್ಯನಂತೆ ಪ್ರಯಾಣಿಸಿದ್ದಾರೆ. ಸಚಿವರು ಹಣ ಕೊಟ್ಟು ಕಂಡಕ್ಟರ್‌ರಿಂದ ಟಿಕೆಟ್ ಪಡೆಯುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.
ಸಾರಿಗೆ ಬಸ್‌ಗಳಲ್ಲಿ ಟಿಕೆಟ್ ನೀಡುವಲ್ಲಿ ವಂಚನೆಗಳೇನಾದರು ಆಗುತ್ತಿವೆಯೇ? ಪ್ರಯಾಣಿಕರು ಸುಗಮ ಸಂಚಾರ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಸಚಿವರು ಮಾರುವೇಷ ಧರಿಸಿ ಬಸ್ ಹತ್ತಿದ್ದರು.
