ನವದೆಹಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್‌ನಲ್ಲಿ ವ್ಯಾಪಕ ಅಕ್ರಮ ನಡೆದಿದೆ ಅಂತ ರಾಜ್ಯ ಚುನಾವಣಾಧಿಕಾರಿಗೆ ದೂರು ಕೊಟ್ಟ ಬೆನ್ನಲ್ಲೇ ಇದೀಗ ದೆಹಲಿಗೆ (Delhi) ತೆರಳಿ ಭಾರತದ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಸೋಮವಾರ (ಜು.6) ರಾಜ್ಯ ಚುನಾವಣಾಧಿಕಾರಿಗೆ ಬಿಜೆಪಿ-ಜೆಡಿಎಸ್ (BJP-JDS) ಜಂಟಿ ನಿಯೋಗ ದೂರು ಕೊಟ್ಟು ಕೊಟ್ಟಿತ್ತು. ಇದೀಗ ದೆಹಲಿಗೆ ತೆರಳಿ ಭಾರತದ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದೆ. ಎಸ್‌ಐಆರ್ ಪ್ರಕ್ರಿಯೆಯು ಆಯೋಗದ ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿಲ್ಲ. ರಾಮನಗರ, ಯಶವಂತಪುರ, ಜಯನಗರ, ಇಂಡಿ, ಕುಣಿಗಲ್, ಪಾವಗಡ ಸೇರಿದಂತೆ ಹಲವು ಕಡೆ ಲೋಪ ಕಂಡು ಬಂದಿದೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ ಕೂಲಂಕಷವಾಗಿ ಪರಿಶೀಲನೆ ಮಾಡುವ ಭರವಸೆ ಸಿಕ್ಕಿದೆ ಅಂತ ದೋಸ್ತಿ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: PUBLiC TV Explainer| ಕೇರಳದಲ್ಲಿ ಭೀಕರ ಭೂಕುಸಿತ – ಏನಿದು ವಯನಾಡು ಸುರಂಗ ಮಾರ್ಗ? ವಿಶೇಷತೆ ಏನು?
📍ನವದೆಹಲಿ
ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಲಾಯಿತು.
ನಾನು ಮತ್ತು ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ… pic.twitter.com/O0GegeDnNv
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) July 7, 2026
ಇದಕ್ಕೆ ಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದು, ಪಾರದರ್ಶಕವಾಗಿ ಆಗ್ತಿದೆ. ಎಲ್ಲರಿಗೂ ಸೌಲಭ್ಯ ಸಿಗುವಂತೆ ನಾವು ಮಾಡುತ್ತಿದ್ದೇವೆ. ಬಿಎಲ್‌ಓಗಳಿಗೆ ಫ್ರೀಹ್ಯಾಂಡ್ ಕೊಟ್ಟಿದ್ದೇವೆ ಅಂದಿದ್ದಾರೆ. ನೆಲಮಂಗಲದ ವಿವಿಧ ಗ್ರಾಮಗಳಿಗೆ ರಾಜ್ಯ ಚುನಾವಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿಎಲ್‌ಒಗಳು ಮನೆ ಮನೆಗೆ ತೆರಳಿ ಹೇಗೆ ಕೆಲಸ ಮಾಡುತ್ತಿದ್ದಾರಾ? ಮತದಾರರು ಸರಿಯಾದ ಮಾಹಿತಿ ಕೊಡುತ್ತಿದ್ದಾರಾ? ಹೀಗೆ ನಾನಾ ರೀತಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇನ್ನು, ವಿಪಕ್ಷಗಳ ಆರೋಪದ ಬೆನ್ನಲ್ಲೇ ರಾಜ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ನಾಳೆ ಸುದ್ದಿಗೋಷ್ಠಿ ನಡೆಸ್ತಿದ್ದಾರೆ. ಈ ಮಧ್ಯೆ, ಬೀದರ್‌ನಲ್ಲಿ ಎಸ್‌ಐಆರ್ ಕಾರ್ಯದಲ್ಲಿದ್ದ ಬಿಎಲ್‌ಒಗೆ ಮೈನರ್ ಬ್ರೈನ್ ಸ್ಟ್ರೋಕ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ: ಇನ್ಮುಂದೆ ಕರ್ನಾಟಕದಲ್ಲಿ ಸಿಗಲಿದೆ ಶಾಶ್ವತ ನಿವಾಸ ಪ್ರಮಾಣ ಪತ್ರ
