Chikkamagaluru
ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್: ವಿಡಿಯೋ ವೈರಲ್
ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಉತ್ಸವಕ್ಕೆ ಅಕ್ಟೋಬರ್ 3ರಂದು ಟಗರು ಸಿನಿಮಾ ನಾಯಕಿ ಮಾನ್ವಿತಾ ಚಾಲನೆ ನೀಡಿದ್ದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರನ್ನು ಡಾನ್ಸ್ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ವಿದ್ಯಾರ್ಥಿಗಳ ಮನವಿಗೆ ಒಪ್ಪಿದ ಮಾನ್ವಿತಾ, ಟಗರು ಸಿನಿಮಾದ ಟಗರು ಬಂತು ಟಗರು ಹಾಡಿಗೆ ವೇದಿಕೆ ಮೇಲೆ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಫೋಟೋಶೂಟ್ ಮಾಡಿಸಿ ಮಾನ್ವಿತಾ ಬಾಲಿವುಡ್‍ಗೆ ಎಂಟ್ರಿ!
ಮಾನ್ವಿತಾ ನೃತ್ಯಕ್ಕೆ ಫಿದಾ ಆದ ವಿದ್ಯಾರ್ಥಿಗಳು, ನಿಮ್ಮೊಂದಿಗೆ ನಾವು ವೇದಿಕೆ ಮೇಲೆ ಹೆಜ್ಜೆ ಹಾಕಬಹುದಾ ಎಂದು ಕೇಳಿದರು. ಆಗ ಮಾನ್ವಿತಾ ನೃತ್ಯ ಮಾಡುತ್ತ ಬನ್ನಿ ಎಂದು ಕರೆದರು. ಮಾನ್ವಿತಾ ಕರೆದಿದ್ದೇ ತಡ ಕೆಲ ವಿದ್ಯಾರ್ಥಿಗಳು ವೇದಿಕೆಗೆ ಎಂಟ್ರಿ ಕೊಟ್ಟು ಸ್ಟೆಪ್ ಹಾಕಿದ್ದಾರೆ.
ವೇದಿಕೆ ಮೇಲೆ ಹೆಚ್ಚಿನ ವಿದ್ಯಾರ್ಥಿಗಳು ಸೇರುತ್ತಿದ್ದಂತೆ ಉಪನ್ಯಾಸಕರು ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸಿದರು. ಮಾನ್ವಿತಾ ಡ್ಯಾನ್ಸ್ ವಿಡಿಯೋ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಖತ್ ವೈರಲ್ ಆಗಿದೆ.