ಮಂಗಳೂರು: ಕಡಲನಗರಿ ಮಂಗಳೂರು ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಇದೀಗ ಮತ್ತೆ ಕೋಮುದ್ವೇಷಕ್ಕೆ ಸಂಚು ರೂಪಿಸಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಲೋಕಂಡ್ವಾಲಾ ಗ್ಯಾಂಗ್‍ನ ಪ್ಲ್ಯಾನ್ ಪ್ಲಾಫ್ ಆಗಿದೆ. ನಗರದ ಹೊರವಲಯದ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮತ್ತೊಮ್ಮೆ ಅಂದರ್ ಆಗಿದ್ದಾನೆ. ಲೋಕಂಡ್ವಾಲಾ ಗ್ಯಾಂಗ್ ರಚಿಸಿ ಮತ್ತೆ ಕೋಮುಧ್ವೇಷಕ್ಕೆ ಸಂಚು ರೂಪಿಸಿದ್ದ ಪಿಂಕಿ ನವಾಜ್ ಗ್ಯಾಂಗ್‍ನ್ನು ಮಂಗಳೂರು ಪೊಲೀಸರು ಅಂದರ್ ಮಾಡಿದ್ದಾರೆ. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ
Advertisement
ಪಿಂಕಿ ನವಾಜ್, ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ನಿಯಾಝ್, ಮೊಹಮ್ಮದ್ ನವಾಝ್, ಮೊಹಮ್ಮದ್ ಫೈಝಲ್, ಮೊಹಮ್ಮದ್ ಮುಸ್ತಾಫ ಎಂಬ ಗ್ಯಾಂಗ್‍ನ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತಿಚೇಗೆ ಪಿಂಕಿ ನವಾಜ್ ದೀಪಕ್ ರಾವ್ ಹತ್ಯೆ ಪ್ರಕರಣದ ಸಾಕ್ಷಿಗಳಿಗೆ ಆಡಿಯೋ ಮೂಲಕ ಬೆದರಿಕೆ ಹಾಕಿದ್ದ. ಸಾಕ್ಷಿದಾರರೇ ಮುಂದಿನ ಟಾರ್ಗೆಟ್ ಎಂದು ಹೇಳಿಕೊಂಡಿದ್ದ. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಈ ಗ್ಯಾಂಗ್‍ನ್ನು ಬಂಧಿನ ಮಾಡಿದ್ದಾರೆ. ಇದನ್ನೂ ಓದಿ: ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್
Advertisement
ಬಿ.ಜೆ.ಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಸಾಕಷ್ಟು ಸುದ್ದಿಯಾಗಿತ್ತು. ಇತ್ತಿಚೇಗೆ ದೀಪಕ್ ರಾವ್ ಸ್ಮರಣಾರ್ಥ ಕಾಟಿಪಳ್ಳದಲ್ಲಿ ಬಸ್‍ಸ್ಟ್ಯಾಂಡ್‍ನ್ನು ಸ್ಥಳೀಯ ಶಾಸಕ ಭರತ್ ಶೆಟ್ಟಿ ಲೋಕಾರ್ಪಣೆಗೊಳಿಸಿದ್ದರು. ಈ ಕುರಿತು ಲೋಕಂಡ್ವಾಲಾ ವಾಟ್ಸಪ್ ಗ್ರೂಪ್‍ನಲ್ಲಿ ಪಿಂಕಿ ನವಾಜ್ ತಂಡ ಚರ್ಚೆ ನಡೆಸಿ ಇದಕ್ಕೂ ಸಹ ಈ ಗ್ಯಾಂಗ್ ವಿರೋಧ ವ್ಯಕ್ತಪಡಿಸಿತ್ತು. ಇದರ ಜೊತೆ ಸುಪಾರಿ ಹತ್ಯೆ ಮಾಡುವುದಕ್ಕೂ ಈ ತಂಡ ರೆಡಿಯಾಗಿ ಇತ್ತು. ಸುರತ್ಕಲ್ ಪರಿಸರದಲ್ಲಿ ನಮ್ಮ ಹವಾ ಇನ್ಮುಂದೆಯು ಇರಬೇಕು ಜನ ಹೆದರಿಕೊಳ್ಳುವಂತೆ ಇರಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಈ ಎಲ್ಲಾ ಮಾಹಿತಿ ಪಡೆದ ಪೊಲೀಸರು ಗ್ಯಾಂಗ್‍ನ ಪ್ರಮುಖರನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಹೊಸ IPL ತಂಡ ಖರೀದಿಸಲು ಮುಂದಾದ ರಣವೀರ್, ದೀಪಿಕಾ
Advertisement
ಈ ಗ್ಯಾಂಗ್‍ನಲ್ಲಿ ಇನ್ನಷ್ಟು ಕ್ರಿಮಿನಲ್‍ಗಳು ಇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಸದ್ಯ ಬಂಧನ ಆಗಿರುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆಯಲಾಗಿದೆ. ಒಟ್ಟಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ರೆಡಿಯಾಗಿದ್ದ ಗ್ಯಾಂಗ್ ಅಂದರ್ ಆಗಿರುವುದು ಜನರಿಗೆ ನೆಮ್ಮದಿಗೆ ತಂದಿದೆ.