ರಾಜ್ಯಾದ್ಯಂತ ಮುಂದಿನ 7 ದಿನಗಳ ಕಾಲ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನ ನಂತರ, ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವೆಡೆ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಮುಂದಿನ 7 ದಿನಗಳ #ಹವಾಮಾನ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) #ಕರ್ನಾಟಕ ರಾಜ್ಯದಾದ್ಯಂತ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನ ನಂತರ, ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ, ಹಾಗೂ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆಯಾಗುವ ಮುನ್ಸೂಚನೆ ಇದೆ pic.twitter.com/joD20VK4OC
— Karnataka State Natural Disaster Monitoring Centre (@KarnatakaSNDMC) May 29, 2026
ನಗರಗಳ ಹವಾಮಾನ ವರದಿ
ಬೆಂಗಳೂರು: 32-22
ಮಂಗಳೂರು: 32-27
ಶಿವಮೊಗ್ಗ: 33-24
ಬೆಳಗಾವಿ: 33-24
ಮೈಸೂರು: 33-22

ಮಂಡ್ಯ: 33-22
ಮಡಿಕೇರಿ: 28-21
ರಾಮನಗರ: 33-22
ಹಾಸನ: 31-22
ಚಾಮರಾಜನಗರ: 32-22
ಚಿಕ್ಕಬಳ್ಳಾಪುರ: 32-21

ಕೋಲಾರ: 32-21
ತುಮಕೂರು: 32-22
ಉಡುಪಿ: 33-27
ಕಾರವಾರ: 32-29
ಚಿಕ್ಕಮಗಳೂರು: 29-20
ದಾವಣಗೆರೆ: 34-25

ಹುಬ್ಬಳ್ಳಿ: 34-24
ಚಿತ್ರದುರ್ಗ: 34-24
ಹಾವೇರಿ: 34-25
ಬಳ್ಳಾರಿ: 37-26
ಗದಗ: 34-24
ಕೊಪ್ಪಳ: 36-26

ರಾಯಚೂರು: 38-28
ಯಾದಗಿರಿ: 39-28
ವಿಜಯಪುರ: 38-26
ಕಲಬುರಗಿ: 38-28
ಬಾಗಲಕೋಟೆ: 37-26

