ಸಂವತ್ಸರ: 1948, ಪರಾಭವ
ಋತು : ಗ್ರೀಷ್ಮ, ಅಯನ : ಉತ್ತರಾಯಣ
ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ
ತಿಥಿ : ಸಪ್ತಮಿ, ನಕ್ಷತ್ರ : ಹುಬ್ಬಾ
ರಾಹುಕಾಲ : 05 : 11 – 06 : 48
ಗುಳಿಕಕಾಲ : 03 : 34 – 05 : 11
ಯಮಗಂಡಕಾಲ : 12 : 21 – 01 : 58
ಮೇಷ: ಪ್ರಯತ್ನಕ್ಕೆ ತಕ್ಕ ಪ್ರತಿಫಲ. ಆರೋಗ್ಯದಲ್ಲಿ ಸುಧಾರಣೆ. ಗ್ರಹೋದ್ಯಮ ಉತ್ಪನ್ನಗಳಿಂದ ಜನಪ್ರಿಯತೆ.
ವೃಷಭ: ದೂರ ಪ್ರಯಾಣ ಸಾಧ್ಯತೆ. ವ್ಯಾಜ್ಯದಲ್ಲಿ ಜಯ. ಸ್ವಾಭಿಮಾನಕ್ಕೆ ಧಕ್ಕೆ.
ಮಿಥುನ: ನಂಬಿಕೆ ದ್ರೋಹ. ಹಿರಿಯರ ಆರೋಗ್ಯ ಸುಧಾರಣೆ. ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸಿ.
ಕಟಕ: ಸಾಲ ಮರುಪಾವತಿ. ಪತ್ನಿ ಆರೋಗ್ಯದಲ್ಲಿ ಏರುಪೇರು. ಕೆಲಸದ ಒತ್ತಡ.
ಸಿಂಹ: ವಾಹನ ರಿಪೇರಿಗೆ ಖರ್ಚು. ಆಸ್ತಿ ಖರೀದಿ ಪ್ರಯತ್ನಕ್ಕೆ ಮುನ್ನಡೆ. ಬಂಧುಗಳಿಂದ ಶುಭ ಸುದ್ದಿ.
ಕನ್ಯಾ: ಸ್ವಂತ ಉದ್ಯಮದಲ್ಲಿ ಅಭಿವೃದ್ಧಿ. ಕೈ ಹಾಕಿದ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ. ದುಡುಕು ಮಾತಿನಿಂದ ಸಂಕಷ್ಟ.
ತುಲಾ: ಮಿತ್ರರಿಂದ ಧನಸಹಾಯ. ಸೋದರರೊಂದಿಗೆ ವಿರಸ. ನಿವೇಶನ ಖರೀದಿಗೆ ಪ್ರಯತ್ನ.
ವೃಶ್ಚಿಕ: ಆಭರಣ ವ್ಯಾಪಾರಿಗಳಿಗೆ ಲಾಭ. ಮೇಲಾಧಿಕಾರಿಗಳಿಂದ ಪ್ರಶಂಸೆ. ಅನಿರೀಕ್ಷಿತ ನೆರವುಗಳಿಂದ ಸಂಕಷ್ಟ ಪರಿಹಾರ.
ಧನಸ್ಸು: ಹಿರಿಯರೊಂದಿಗೆ ಮಾತಿನ ಸಮರ. ಚತುರ ನಡೆನುಡಿಯಿಂದ ಲಾಭ. ಹಿತಶತ್ರುಗಳ ಕಾಟ.
ಮಕರ: ಪ್ರಯತ್ನಕ್ಕೆ ತಕ್ಕ ಫಲ. ಸರ್ಕಾರಿ ನೌಕರರಿಗೆ ವರ್ಗಾವಣೆಯ ಭಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.
ಕುಂಭ: ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ. ಸ್ವಂತ ಕೆಲಸಕ್ಕೆ ಆದ್ಯತೆ ಇರಲಿ. ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ.
ಮೀನ: ಅತಿಯಾದ ಆತ್ಮವಿಶ್ವಾಸ ಬೇಡ. ಸಣ್ಣ ಯೋಜನೆಗಳಿಂದ ಯಶಸ್ಸು. ವಾಹನ ಖರೀದಿಗೆ ಹಣಕಾಸಿನ ಅಡಚಣೆ.
