ಕೊಪ್ಪಳ: ಪರಿಹಾರ ಹಣದ ವಿಚಾರವಾಗಿ ನಡೆದ ಗಲಾಟೆ ವೇಳೆ ರೈತರ ಶರ್ಟ್ ಕಾಲರ್ ಹಿಡಿದು ಪಿಎಸ್‌ಐ ದರ್ಪ ತೋರಿಸಿರುವ ಘಟನೆ ಯಲಬುರ್ಗಾ (Yalaburga) ತಾಲೂಕಿನಲ್ಲಿ ಗುತ್ತೂರ ಗ್ರಾಮದಲ್ಲಿ ನಡೆದಿದೆ.
ಬೇವೂರ ಪೊಲೀಸ್ ಠಾಣೆಯ ಪಿಎಸ್‌ಐ ಗುರುರಾಜ್ ರೈತರಾದ ಪ್ರಕಾಶ್, ಶ್ರೀಕಾಂತ್ ಹಾಗೂ ವಿಜಯರೆಡ್ಡಿ ಮೇಲೆ ದರ್ಪ ತೋರಿದ್ದಾನೆ. ಇದನ್ನೂ ಓದಿ: ಹೆಚ್‌ಡಿಕೆ ಆರಂಭಿಸಿ, ಬಿಎಸ್‌ವೈ ಮುಂದುವರಿಸಿದ್ದ ಬಿಡದಿ ಯೋಜನೆ: ಡಿಕೆಶಿ ವಾಗ್ದಾಳಿ
ಶುಕ್ರವಾರ (ಜೂ.19) 10 ಎಕರೆ ಜಮೀನಿನಲ್ಲಿ ಹೈ-ಟೆನ್ಶನ್ ವಿದ್ಯುತ್‌ನ ನಾಲ್ಕು ಕಂಬ ಅಳವಡಿಸಲು ರೈತರು 1.20 ಕೋಟಿ ರೂ. ಪರಿಹಾರ ಕೇಳಿದ್ದರು. ಆದರೆ ಅಳವಡಿಕೆ ಸಿಬ್ಬಂದಿ 40 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದರು. ಇದಕ್ಕೆ ಒಪ್ಪದಾಗ ಜಮೀನಿನಲ್ಲಿ ಗಲಾಟೆ ನಡೆದಿತ್ತು. ಇದೇ ವೇಳೆ ಪಿಎಸ್‌ಐ ಮೂವರು ರೈತರ ಕಾಲರ್ ಹಿಡಿದು ಎಳೆದುಕೊಂಡು ಹೋಗಿದ್ದಾನೆ.
ಇದಕ್ಕೂ ಮುನ್ನ ಇದೇ ಪಿಎಸ್‌ಐ ಗುರುರಾಜ್ ಕುಕನೂರ ಪೊಲೀಸ್ ಠಾಣೆಯಲ್ಲಿದ್ದಾಗ ದಲಿತ ಮುಖಂಡನನ್ನು ಥಳಿಸಿರೋ ಆರೋಪದಡಿ ಅಮಾನತ್ತಾಗಿದ್ದರು. ಕೆಲ ದಿನಗಳ ಹಿಂದೆ ಬೇವೂರಗೆ ವರ್ಗಾವಣೆಯಾಗಿದ್ದ. ಇದೀಗ ಮತ್ತೆ ರೈತರ ಮೇಲೆ ದರ್ಪ ತೋರಿದ್ದಾನೆ.ಇದನ್ನೂ ಓದಿ: ವಿಶ್ವಕ್ಕೆ ಶಾಕ್ – ಇರಾನ್‌ನಿಂದ ಮತ್ತೆ ಹಾರ್ಮುಜ್ ಜಲಸಂಧಿ ಬಂದ್
