DistrictsKarnatakaLatestMain PostVijayapura

ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್

ವಿಜಯಪುರ: ನಾನು ಈ ದೇಶದ ಪ್ರಜೆ, ಕಾನೂನನ್ನು ಗೌರವಿಸುತ್ತೇನೆ. ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆರೋಗ್ಯ ಸಚಿವ ಸುಧಾಕರ್‍ ಗೆ ತಿರುಗೇಟು ನೀಡಿದ್ದಾರೆ.

ಕೆಲದಿನಗಳ ಹಿಂದೆ ಸುಧಾಕರ್, ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್‍ನ ಬ್ರಹ್ಮಾಂಡ ಭ್ರಷ್ಟಾಚಾರವನ್ನ ಬಯಲಿಗೆ ಎಳೆಯುತ್ತೇನೆ ಎಂದು ಪರೋಕ್ಷವಾಗಿ ಜೈಲಿಗೆ ಹಾಕಿಸೋವರೆಗೂ ನಾನು ವಿರಮಿಸೋದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಕುಮಾರ್, ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ ಇದಕ್ಕೆ ನಂದೇನು ತಕರಾರಿಲ್ಲ. ಅವರ ಕೆಲಸ ಅವರು ಮುಂದುವರಿಸಲಿ. ವೈಯಕ್ತಿಕವಾಗಿ ನನಗೆ ಯಾರ ಮೇಲು ದ್ವೇಷವಿಲ್ಲ. ಅವರದೇ ಸರ್ಕಾರ ಅಂದ ಮೇಲೆ ಅವರು ಯೋಚನೆ ಮಾಡಿಯೇ ಮಾತನಾಡಿರುತ್ತಾರೆ. ಅವರು ಮಾತನಾಡುವಾಗ ಗೌರವಯುತವಾಗಿ, ಯೋಚನೆ ಮಾಡಿ ಮಾತನಾಡಬೇಕು. ಆಡಳಿತ ಪಕ್ಷದವರು ಹೀಗೆ ಮಾಡುತ್ತಾರೆ ಎಂದರೆ ಅವರ ಬಳಿ ಸಾಕ್ಷ್ಯಾಧಾರ ಇರಬೇಕು ಎಂದು ಪರೋಕ್ಷವಾಗಿ ಕುಟುಕಿದರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

ಆರ್‌ಎಸ್‌ಎಸ್‌ ಟೀಕಾ ಪ್ರಹಾರ ವಿಚಾರವಾಗಿ ಮಾತನಾಡಿ, ನಾನೊಬ್ಬ ಸಾಮಾನ್ಯ ಮನುಷ್ಯ, ಏನೋ ಗ್ರಹಚಾರಕ್ಕೆ ರಾಜಕೀಯಕ್ಕೆ ಬಂದಿರುತ್ತೇವೆ. ಜನಾ ನಮಗೊಂದು ಅವಕಾಶ ಕೊಟ್ಟಿರುತ್ತಾರೆ. ದೊಡ್ಡದೊಡ್ಡವರ ವಿಚಾರಕ್ಕೆಲ್ಲಾ ನಾನು ಮಾತನಾಡುವುದಿಲ್ಲ. ಸಂಘದ ಬಗ್ಗೆ ನನಗೇನು ಅನಿಸುವುದಿಲ್ಲ. ಅದೊಂದು ಸಂಘಟನೆ, ಅವರ ಪಾಡಿಗೆ ಅವರಿದ್ದಾರೆ. ಹೇಳಬೇಕಾದ ಅಗತ್ಯ ಬಂದಾಗ ಹೇಳುತ್ತೇನೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ

Leave a Reply

Your email address will not be published. Required fields are marked *

Back to top button