ಲಕ್ನೋ: ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ವ್ಯಕ್ತಿಯೊಬ್ಬ ತನ್ನ ಒಂದು ವರ್ಷದ ಮಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಮಗುವನ್ನು ಸೇತುವೆಯಿಂದ ಯಮುನಾ ನದಿಗೆ (Yamuna River) ಎಸೆದಿದ್ದಾನೆ.

ಆಗ್ರಾದ ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಕ್ಬರ ಯಮುನಾ ಸೇತುವೆಯಲ್ಲಿ ಈ ಘಟನೆ ನಡೆದಿದೆ. ರಿಂಕು ಮತ್ತು ಆತನ ಪತ್ನಿ ಲಕ್ಷ್ಮಿ ದ ದಂಪತಿ ತಮ್ಮ ಮಗಳೊಂದಿಗೆ ಆಗ್ರಾ ನಗರಕ್ಕೆ ಬೈಕ್‌ನಲ್ಲಿ ಹೊರಟಿದ್ದರು. ದಾರಿಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: 46 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ; 1980ರ ಕೇಸ್‌ಗೆ 2026ರಲ್ಲಿ ಕ್ಲೈಮ್ಯಾಕ್ಸ್
ಬೈಕ್ ಸೇತುವೆ ಬಳಿ ಬಂದಾಗ ರಿಂಕು ತನ್ನ ಮಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕೆಂದು ಹೇಳಿ ಸೇತುವೆಯ ಮೇಲೆ ಬೈಕ್ ನಿಲ್ಲಿಸಿ, ಫೋಟೋ ಕ್ಲಿಕ್ಕಿಸಿಕೊಂಡು ನಂತರ ಮಗುವನ್ನು ನದಿಗೆ ಎಸೆದಿದ್ದಾನೆ ಎಂದು ಆತನ ಪತ್ನಿ ಆರೋಪಿಸಿದ್ದಾಳೆ.
ಬಳಿಕ ಪತ್ನಿಯನ್ನು ಸೇತುವೆಯಿಂದ ತಳ್ಳಲು ಪ್ರಯತ್ನಿದ್ದಾನೆ. ಈ ವೇಳೆ ಆಕೆ ಕಿರುಚಾಡಿದ್ದು, ದಾರಿಯಲ್ಲಿ ಹೋಗುತ್ತಿದ್ದ ಜನರು ಬಂದು ಆಕೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಮಗುವನ್ನು ನದಿಗೆಸೆದ ವಿಚಾರ ತಿಳಿದು ಜನ ಆತನಿಗೆ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ. ಆತನ ಮೇಲೆ ಜನ ಹಲ್ಲೆ ನಡೆಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಗುವಿಗಾಗಿ ಮುಳುಗು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮಗುವಿನ ಸುಳಿವು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಸಿಕಂದ್ರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಆಷಾಢ ಮುಗಿದರೂ ತವರಿನಿಂದ ಬಾರದ ಪತ್ನಿ – ಮನನೊಂದು ನೇಣಿಗೆ ಶರಣಾದ ಪತಿ
