ನವದೆಹಲಿ: ತನ್ನ ಮೊಬೈಲ್ ಹಾಗೂ ಇಯರ್ ಫೋನ್ ಕದ್ದಿದ್ದಾನೆ ಎಂದು ದೆಹಲಿಯ ವ್ಯಕ್ತಿಯೋರ್ವ, ಮತ್ತೋರ್ವ ವ್ಯಕ್ತಿಯನ್ನು ಬೆತ್ತದಿಂದ ನಿರ್ದಾಕ್ಷ್ಯಿಣವಾಗಿ ಥಳಿಸಿ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.
Advertisement
ದೆಹಲಿಯ ಪಂಚಕುಯಾನ್ ರಸ್ತೆಯ ಹನುಮಾನ್ ಮಂದಿರದ ಬಳಿ ಕಳೆದ ತಿಂಗಳು ಈ ಘಟನೆ ನಡೆದಿದ್ದು, ಆರೋಪಿಯನ್ನು ರಿಕ್ಷಾ ಚಾಲಕ ಶಾಹಿದ್ ಎಂದು ಗುರುತಿಸಲಾಗಿದೆ. ಏಪ್ರಿಲ್ 2 ರಂದು ರಸ್ತೆಯ ಬಳಿ ವ್ಯಕ್ತಿಯೋರ್ವ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಕರೆ ಬಂದಿದೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ವ್ಯಕ್ತಿ ಮೃತಪಟ್ಟಿರುವು ಗೊತ್ತಾಗಿದೆ. ಇದನ್ನೂ ಓದಿ; PSI ನೇಮಕಾತಿಯಲ್ಲಿ ಅಕ್ರಮ – ಬೆಂಗ್ಳೂರಿನ 7 ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಣು
Advertisement
Advertisement
ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಈ ವೇಳೆ ವ್ಯಕ್ತಿಯ ಮುಖ, ಭುಜಗಳು, ಎದೆ, ಹೊಟ್ಟೆ, ಬೆನ್ನು, ತೊಡೆ, ತೊಡೆಸಂದು ಇತ್ಯಾದಿ ಭಾಗಗಳಿಗೆ ಗಾಯವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ; ರಂಜಾನ್ ಮುನ್ನಾ ದಿನವೇ ಎರಡು ಗುಂಪುಗಳ ಮಧ್ಯೆ ಗಲಾಟೆ – ಇಂಟರ್ನೆಟ್ ಸ್ಥಗಿತ
Advertisement
ಘಟನೆ ಸಂಬಂಧ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮೃತ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಮತ್ತೋರ್ವ ವ್ಯಕ್ತಿ ಥಳಿಸಿರುವುದು ತಿಳಿದುಬಂದಿದೆ. ನಂತರ ಆರೋಪಿಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ಶಾಹಿದ್ ಸಿಕ್ಕಿಬಿದ್ದಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.