ಧಾರವಾಡ: ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿಯೊಬ್ಬರು ನೀರು ಪಾಲಾದ ಘಟನೆ ನವಲಗುಂದ ತಾಲೂಕಿನ ಯಮನೂರ ಬೆಣ್ಣಿಹಳ್ಳದಲ್ಲಿ ನಡೆದಿದೆ.
Advertisement
ಮುದ್ದೆಬಿಹಾಳ ಮೂಲದ ವಾಸಿಂ (22) ಮೃತ ವ್ಯಕ್ತಿ. ಇವರು ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದ ವೇಳೆ ಅವಘಡ ಸಂಭವಿಸಿದೆ. ತಾಯಿ ಜೊತೆಗೆ ಗೋವಾಕ್ಕೆ ದುಡಿಯಲು ಹೋಗಿದ್ದ ವಾಸಿಂ, ಕುಟುಂಬ ಸಮೇತ ಗೋವಾದಿಂದ ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದರು. ಅಂತೆಯೇ ಸ್ನಾನ ಮಾಡಲೆಂದು ಬೆಣ್ಣಿಹಳ್ಳಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬುಲ್ಡೋಜರ್ ಸದ್ದು: 14 ಮನೆಗಳು ಸೇರಿದಂತೆ 17 ಟಿನ್ ಶೆಡ್ ತೆರವು
Advertisement
Advertisement
ದರ್ಶನಕ್ಕೂ ಮೊದಲು ಸ್ನಾನ ಮಾಡಲು ಹಳ್ಳಕ್ಕೆ ಇಳಿದಿದ್ದ ವೇಳೆ ಪಿಟ್ಸ್ ಬಂದು ನೀರುಪಾಲಾಗಿದ್ದಾರೆ. ನವಲಗುಂದ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.