– ಜನನ ಪ್ರಮಾಣ ಹೆಚ್ಚಳಕ್ಕೆ ಆಂಧ್ರ ಸಿಎಂ ಆಫರ್
ಅಮರಾವತಿ: ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿಸಲು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಹೊಸ ಯೋಜನೆಯೊಂದನ್ನ ಘೋಷಿಸಿದ್ದಾರೆ. 3ನೇ ಮಗು ಹುಟ್ಟಿದ್ರೆ 30,000 ರೂ. ಮತ್ತು 4ನೇ ಮಗು ಹುಟ್ಟಿದ್ರೆ 40,000 ರೂ. ಪ್ರೋತ್ಸಾಹ ಧನ (Incentives) ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸ್ವರ್ಣ ಆಂಧ್ರ, ಸ್ವಚ್ಛ ಆಂಧ್ರ’ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 3ನೇ ಮತ್ತು 4ನೇ ಮಗು ಹುಟ್ಟಿದ್ರೆ ಆರ್ಥಿಕ ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ: Operation RAGEPILL | 182 ಕೋಟಿ ಮೌಲ್ಯದ ʻಜಿಹಾದಿ ಡ್ರಗ್ʼ ಜಪ್ತಿ – ಅಮಿತ್ ಶಾ

ಜನನ ಪ್ರಮಾಣ (Birth rate) ಹೆಚ್ಚಿಸಲು ಸಮಾಜ ಒಟ್ಟಾಗಿ ಕೆಲಸ ಮಾಡುವ ಸಮಯ ಈಗ ಬಂದಿದೆ. ಈ ಕುರಿತು ಸರ್ಕಾರ ಅಧಿಕೃತ ತೀರ್ಮಾನ ಕೈಗೊಂಡಿದ್ದು, ಮುಂದಿನ 1 ತಿಂಗಳೊಳಗೆ ಸಂಪೂರ್ಣ ಮಾರ್ಗಸೂಚಿ ಮತ್ತು ವಿವರಗಳನ್ನ ಪ್ರಕಟಿಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ: PUBLiC TV Explained | ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬಿಕ್ಕಟ್ಟು – ಭಾರತದಿಂದ ರಫ್ತು ಬಂದ್, ದಿಢೀರ್ ಸಮಸ್ಯೆ ಶುರುವಾಗಿದ್ದೇಕೆ?
ಜನಸಂಖ್ಯೆ ಬೆಳವಣಿಗೆ ಕುಸಿತ
ಕೆಲ ದಿನಗಳ ಹಿಂದೆ ಸಿಎಂ ನಾಯ್ಡು ಅವರು, 2ನೇ ಮಗು ಹುಟ್ಟಿದ್ರೆ 25,000 ರೂ. ಪ್ರೋತ್ಸಾಹ ಧನ ನೀಡುವ ಯೋಜನೆ ಘೋಷಿಸಿದ್ದರು. ಮಾರ್ಚ್ 5 ರಂದು ಈ ಯೋಜನೆಯನ್ನ ಅನುಷ್ಠಾನಗೊಳಿಸಿದ್ದರು. ಆದ್ರೆ ಜನನ ಪ್ರಮಾಣದಲ್ಲಿ ಕುಸಿತ ಕಂಡುಬಂದ ಹಿನ್ನೆಲೆ 3 ಮತ್ತು 4ನೇ ಮಗು ಹೊಂದಿದ ಕುಟುಂಬಗಳಿಗೆ ಪ್ರೋತ್ಸಾಹ ಧನ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ಜನಸಂಖ್ಯೆ ಕುಸಿತಕ್ಕೆ ಕಾರಣ ಏನು?
ಇತ್ತೀಚಿನ ದಿನಗಳಲ್ಲಿ, ಕೆಲ ದಂಪತಿಗಳು ಕುಟುಂಬದ ಆದಾಯ ಕಡಿಮೆ ಮಾಡಲು ಒಂದು ಮಗು ಹೊಂದಲು ಬಯಸುತ್ತಿದ್ದಾರೆ. ಮೊದಲು ಮಗು ಗಂಡು ಮಗುವಾಗಿದ್ದರೆ, 2ನೇ ಮಗು ಹೊಂದುವ ಪ್ರಮೇಯಕ್ಕೆ ಹೋಗುತ್ತಿಲ್ಲ. ಅಲ್ಲದೇ ಕೆಲ ಹೆಣ್ಣುಮಕ್ಕಳು ನಿಗದಿತ ವಯಸ್ಸಿಂತ ತಡವಾಗಿ ಮದುವೆ ಆಗುತ್ತಿದ್ದು, ಆರೋಗ್ಯ ಸಮಸ್ಯೆಗಳು ಕೂಡ ಮಕ್ಕಳನ್ನ ಜನನಕ್ಕೆ ತೊಡಗು ತರುತ್ತಿವೆ. ಇದನ್ನೂ ಓದಿ: ಭಾರತದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ರೆ ಭೂಪಟದಲ್ಲಿ ಇಲ್ಲದಂತೆ ಮಾಡ್ತೀವಿ: ಪಾಕ್‌ಗೆ ಖಡಕ್ ವಾರ್ನಿಂಗ್

