– ಮರುಚುನಾವಣೆಗೆ ದೀದಿ ಪಟ್ಟು
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರನ್ನು (Chief Election Commissioner) ಬಂಧಿಸಬೇಕು ಹಾಗೂ ಮರುಚುನಾವಣೆ (Re-election) ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ (TMC) ಮಮತಾ ಬ್ಯಾನರ್ಜಿ (Mamata Banerjee) ಒತ್ತಾಯಿಸಿದ್ದಾರೆ.
ಮರುಚುನಾವಣೆ ಕುರಿತು ಮತ್ತೇ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ಬಂಗಾಳವನ್ನು ವಶಪಡಿಸಿಕೊಳ್ಳಲು ಮತ್ತು ಟಿಎಂಸಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಾರಂಭಿಲಾಗಿದೆ. ಬಿಜೆಪಿ ಪಿತೂರಿ ಮಾಡಿ ಚುನಾವಣಾ ಆಯೋಗದ ಸಹಾಯದಿಂದ ಅಧಿಕಾರಕ್ಕೆ ಬಂದಿದೆ. ಬಿಜೆಪಿಯ ಐಟಿ ಸೆಲ್ ಅಧಿಕಾರಿ ಸೀಮಾ ಖನ್ನಾ ಎಸ್‌ಐಆರ್‌ಗಿಂತ ಮೊದಲು 58 ಲಕ್ಷ ಜನರ ಹೆಸರನ್ನು ಎಐ ಸಹಾಯದಿಂದ ತೆಗೆದುಹಾಕಲಾಗಿದ್ದು, 34 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಒಣಗುತ್ತಿದೆ ಬೆಳೆ, ಕರಗುತ್ತಿದೆ ಕಾಸು – ಟ್ಯಾಂಕರ್ ಮೊರೆ ಹೋದ ರೈತರು
ಸಧ್ಯಕ್ಕೆ ಬಂಗಾಳದಲ್ಲಿ ಈಗ SIR ಎಂದರೆ ವಿಶೇಷ ತೀವ್ರ ಪರಿಷ್ಕರಣೆ ಬದಲಾಗಿ ಬಿಜೆಪಿ ಅದನ್ನು ವಿಶೇಷ ಪ್ರೋತ್ಸಾಹ ಧನವನ್ನಾಗಿ ಬದಲಿಸಿಕೊಂಡಿದೆ. ಆಡಳಿತ ಪಕ್ಷವು ಚುನಾವಣೆಗಳನ್ನು ದೋಚಲು ಚುನಾವಣಾ ಆಯೋಗದೊಂದಿಗೆ ಜಂಟಿ ಉದ್ಯಮ ಕಂಪನಿಯನ್ನು ನಡೆಸುತ್ತಿದೆ. ಬಿಜೆಪಿ ಸಿಂಹಾಸನವನ್ನು ಪಡೆಯಲು ಬಂಗಾಳ, ಬಿಹಾರ ಮತ್ತು ಹರಿಯಾಣದಲ್ಲಿ ಚುನಾವಣೆಗಳನ್ನು ದೋಚಿದೆ. ಬಂಗಾಳದಲ್ಲಿ ಮತ್ತೊಮ್ಮೆ ‘ಮುಕ್ತ ಮತ್ತು ನ್ಯಾಯಯುತ’ ಚುನಾವಣೆ ನಡೆಸಿ ಮತ್ತೇ ಗೆಲ್ಲುತ್ತೀರಾ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಭಾರತ ಸ್ವತಂತ್ರವಾಗಿಲ್ಲ
ಬಿಜೆಪಿ ಪ್ರಜಾಪ್ರಭುತ್ವ ಯಂತ್ರೋಪಕರಣಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ ಮತ್ತು ನಮ್ಮನ್ನು ಅವಲಂಬಿತರನ್ನಾಗಿ ಮಾಡಿದೆ. ಬಿಜೆಪಿ ಆಡಳಿತದಲ್ಲಿ ಭಾರತ ಸ್ವತಂತ್ರವಾಗಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಮತ್ತೆ ಬಿಗ್ ಶಾಕ್ – ಮಾಫಿ ಸಾಕ್ಷಿ ಪ್ರಶ್ನಿಸಿದ್ದ ಅರ್ಜಿ ವಜಾ

