Connect with us

Latest

ಕೈಗಾರಿಕಾ ಬೆಳವಣಿಗೆ ನಿಂತಿದೆ, ಪ್ರಧಾನಿ ಮೋದಿ ಗಡ್ಡ ಬೆಳೆಯುತ್ತಿದೆ: ದೀದಿ

Published

on

– ಅಮಿತ್ ಶಾರನ್ನು ರಾಕ್ಷಸ ಎಂದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಬೆಳವಣಿಗೆ ನಿಂತಿದೆ, ಪ್ರಧಾನಿ ನರೇಂದ್ರ ಮೋದಿ ಅವರ ಗಡ್ಡ ಮಾತ್ರ ಬೆಳೆಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಮಾತ್ರವಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಕ್ಷಸ ಎಂದು ಹೇಳಿದ್ದಾರೆ.

ಕೆಲವು ಬಾರಿ ತಾವು ಸ್ವಾಮಿ ವಿವೇಕಾನಂದ ಎಂದು ಹೇಳಿಕೊಳ್ಳುತ್ತಾರೆ, ಕ್ರೀಡಾಂಗಣಕ್ಕೆ ತಮ್ಮದೇ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಅವರ ಮೆದುಳಿನಲ್ಲಿ ಏನೋ ಸಮಸ್ಯೆ ಇದೆ. ಅವರ ಸ್ಕ್ರೂ ಲೂಸ್ ಆದಂತೆ ಕಾಣುತ್ತದೆ ಎಂದು ಪ್ರಧಾನಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ವಾರದ ನಡೆದ ಚುನಾವಣಾ ರ‍್ಯಾಲಿ ವೇಳೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, 7 ಬಾರಿ ಸಂಸದೆಯಾಗಿ ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ಇಂತಹ ನಿರ್ದಯ ಹಾಗೂ ಕ್ರೂರ ಪ್ರಧಾನಿಯನ್ನು ಎಂದೂ ಕಂಡಿಲ್ಲ. ಬಿಜೆಪಿ ಎಂದರೆ ಭಾರತೀಯ ಜೊಘೊನ್ನೊ ಪಾರ್ಟಿ(ಭಾರತೀಯ ಕೆಟ್ಟ ಪಕ್ಷ) ನಾನು 7 ಬಾರಿ ಲೋಕಸಭಾ ಸದಸ್ಯೆಯಾಗಿದ್ದೇನೆ, ಹಲವು ಪ್ರಧಾನಿಗಳನ್ನು ನೋಡಿದ್ದೇನೆ. ಆದರೆ ಇಂತಹ ನಿರ್ದಯ, ಕ್ರೂರ ಪ್ರಧಾನಿಯನ್ನು ನೋಡಿರಲಿಲ್ಲ. ಬಿಜೆಪಿ ರಾಕ್ಷಸ, ರಾವಣ, ದುರ್ಯೋಧನ, ದುಶಾಸನರ ಹಾಗೂ ಅಶಾಂತಿ, ಭಯೋತ್ಪಾದನೆಯ ಪಕ್ಷವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮಾರ್ಚ್ 27ರಿಂದ ಏಪ್ರಿಲ್ 29ರ ವರೆಗೆ ಮತದಾನ ನಡೆಯಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Click to comment

Leave a Reply

Your email address will not be published. Required fields are marked *