ನವದೆಹಲಿ: ಒಂದು ದಿನ ನಾವು ಅಮಿತ್ ಶಾ(Amit Shah) ಅವರನ್ನು ಹೊರಗೆ ಎಳೆದು ತಂದು ಜನರ ಮುಂದೆ ನಿಲ್ಲಿಸುತ್ತೇವೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಕ್ರೋಶ ಹೊರಹಾಕಿದ್ದಾರೆ.
ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ಖರ್ಗೆ ಜಂತರ್ ಮಂತರ್‌ನಲ್ಲಿ(Jantar Mantar) ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿದರು.
ಈ ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ. ಸಂಸತ್ತಿನತ್ತ ಶಾಂತಿಯುತವಾಗಿ ಮೆರವಣಿಗೆ ಹೊರಟಿದ್ದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಅಶ್ರುವಾಯು ಮತ್ತು ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ. ರೈಲ್ವೆ ನಿಲ್ದಾಣಗಳು ಮತ್ತು ಇಂಟರ್ನೆಟ್ ಸೇವೆಗಳನ್ನು ಬಂದ್ ಮಾಡಲಾಗಿತ್ತು ಎಂದು ಖರ್ಗೆ ದೂರಿದರು.
देश के गाँव और शहरों से आए छात्रों को पैलेट गन से मारा गया।
कई छात्र अस्पतालों में भर्ती हैं, किसी की आंख गई तो कइयों के हाथ-पैर टूट गए। इसके जिम्मेदार गृह मंत्री अमित शाह हैं।
अमित शाह बंद कमरे में बैठकर ये बातें सुन रहे होंगे, लेकिन वो बहुत दिनों तक बंद कमरे में छिप नहीं… pic.twitter.com/FtdmCjKAxz
— Mallikarjun Kharge (@kharge) July 30, 2026
ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಹಲವು ವಿದ್ಯಾರ್ಥಿಗಳ ಕೈಕಾಲುಗಳು ಮುರಿದಿವೆ, ಕಣ್ಣುಗಳಿಗೆ ಪೆಲೆಟ್ ಏಟು ಬಿದ್ದಿದೆ. ಇದನ್ನೆಲ್ಲಾ ನೋಡಿ ನಮಗೆ ನಾಚಿಕೆಯಾಗುತ್ತಿದೆ. ಈ ಘಟನೆಗೆ ಗೃಹ ಸಚಿವರೇ ಕಾರಣ. ಅವರು ಬಾಗಿಲ ಹಿಂದೆ ಅಡಗಿ ಕುಳಿತಿರಬಹುದು, ಆದರೆ ಹೆಚ್ಚು ಕಾಲ ಅಡಗಿರಲು ಸಾಧ್ಯವಿಲ್ಲ. ಒಂದು ದಿನ ನಾವು ಅವರನ್ನು ಹೊರಗೆ ಎಳೆದು ತಂದು ಜನರ ಮುಂದೆ ನಿಲ್ಲಿಸುತ್ತೇವೆ ಎಂದು ಕಿಡಿಕಾರಿದರು.
ಖರ್ಗೆ ಅವರ ‘ಹೊರಗೆ ಎಳೆದು ತರುತ್ತೇವೆ’ ಎಂಬ ಪದಪ್ರಯೋಗಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹೇಳಿಕೆ ಹಿಂಸಾಚಾರದ ಬೆದರಿಕೆ ಎಂದು ಕರೆದಿದ್ದಾರೆ. ಸದನದ ನಾಯಕ ಜೆ.ಪಿ. ನಡ್ಡಾ ಅವರು ಈ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಿದರು. ಇದನ್ನೂ ಓದಿ: ಕೇಸರಿ ಬಣ್ಣದಲ್ಲಿ ಹಾಕಿ ತಂಡ| ಇದು ದೇಶದ ಇತಿಹಾಸ ಬದಲಿಸುವ ಯತ್ನ: ಪ್ರಿಯಾಂಕಾ ಆಕ್ರೋಶ
ಅಧಿಕಾರ ಕಳೆದುಕೊಳ್ಳುವ ಭಯದಿಂದ ಸರ್ಕಾರವು ಈ ಮಸೂದೆಯನ್ನು ತಂದಿದೆ. ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ, ಬೀದಿಗಿಳಿದು ಪ್ರತಿಭಟಿಸುತ್ತಿರುವ ಯುವಕರನ್ನು ಶಾಂತಗೊಳಿಸಲು ಮತ್ತು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಖರ್ಗೆ ಆರೋಪಿಸಿದರು.
ಇನ್ನೊಂದೆಡೆ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, ಯುಪಿಎ ಆಡಳಿತದ ಅವಧಿಯಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದ್ದರೂ ಯಾವುದೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ರಚಿಸಲು ಕಾಂಗ್ರೆಸ್ ವಿಫಲವಾಗಿತ್ತು. ಯುಪಿಎ ಅರ್ಧಕ್ಕೆ ಬಿಟ್ಟಿದ್ದ ಕೆಲಸವನ್ನು ಪ್ರಧಾನಿ ಮೋದಿ ಪೂರ್ಣಗೊಳಿಸಿದ್ದಾರೆ ಎಂದು ಟೀಕಿಸಿದರು. ಹೊಸ ಕಾನೂನು ಜಾರಿಗೆ ಬಂದ ನಂತರ 52 ಎಫ್‌ಐಆರ್‌ಗಳು ದಾಖಲಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನಡೆಯುತ್ತಿದ್ದ ಆತ್ಮಹತ್ಯೆಗಳು ಕಡಿಮೆಯಾಗಿವೆ ಎಂದು ತಿಳಿಸಿದರು.
