ಬಾಗಲಕೋಟೆ :ಪ್ರವಾಹ ಸಂತ್ರಸ್ತರಿಗಾಗಿ ಮೀಸಲಿಟ್ಟಿದ್ದ ನಿವೇಶನ ಮತ್ತು ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡದೆ, ಸಂತ್ರಸ್ತರಲ್ಲದವರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ(Lokayukta) ಅಧಿಕಾರಿಗಳು ಬಾದಾಮಿ ತಹಶೀಲ್ದಾರ್(Badami Tahsildar) ಕಾರ್ಯಾಲಯದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
2009ರಲ್ಲಿ ಸುರಿದ ಭೀಕರ ಅತೀವೃಷ್ಟಿ ಹಾಗೂ ಮಲಪ್ರಭಾ ನದಿಯ ಪ್ರವಾಹದಿಂದಾಗಿ ಬಾದಾಮಿ ತಾಲೂಕಿನ ತಮಿನಾಳ ಗ್ರಾಮದ ಹಲವು ಕುಟುಂಬಗಳು ಮನೆ, ಆಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದವು.

ಸಂತ್ರಸ್ತರ ಪುನರ್ವಸತಿಗಾಗಿ ಕೈಗೊಂಡ ಯೋಜನೆಯಲ್ಲಿ ನಿಜವಾದ 38 ಸಂತ್ರಸ್ತರನ್ನು ಕೈಬಿಡಲಾಗಿದೆ. ಬದಲಿಗೆ ನಿಯಮಬಾಹಿರವಾಗಿ ಸಂತ್ರಸ್ತರಲ್ಲದ 62 ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ(Flood Relief House Allotments) ಮಾಡಲಾಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಅಕ್ರಮದ ವಿರುದ್ಧ ತಮಿನಾಳ ಗ್ರಾಮದ ನೈಜ ಸಂತ್ರಸ್ತರು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಬೀದರ್‌ನಲ್ಲಿ ಕೃಷ್ಣಮೃಗ ಬೇಟೆಯಾಡಿದ 6 ಬೇಟೆಗಾರರು ಅಂದರ್

