ಟ್ರೋಲ್ ಮಾಡುವವರಿಗೆ ಡೋಂಟ್ ಕೇರ್: ಹೊಸ ಫೋಟೋ ಶೇರ್ ಮಾಡಿ ಟಾಂಗ್ ಕೊಟ್ಟ ಸುಶ್ಮಿತಾ ಸೇನ್

Public TV
1 Min Read
sushmitha

ಬಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸುದ್ದಿ ಅಂದ್ರೆ ಸುಶ್ಮಿತಾ ಸೇನ್ ಮತ್ತು ಲಿಲಿತ್ ಮೋದಿ ಡೇಟಿಂಗ್ ವಿಚಾರ. ಅದ್ಯಾವ ಗಳಿಗೆಯಲ್ಲಿ ಲಲಿತ್ ಮೋದಿ, ಸುಶ್ಮಿತಾ ಜತೆಗಿನ ರಿಲೇಷನ್‌ಶಿಪ್ ಬಗ್ಗೆ ಪೋಸ್ಟ್ ಮಾಡಿದ್ರೋ ಅಂದಿನಿಂದ ಸುಶ್ಮಿತಾ ಸೇನ್ ಸಖತ್ ಟ್ರೋಲ್ ಆಗುತ್ತಿದ್ದಾರೆ. ಇದೀಗ ಅದ್ಯಾವದಕ್ಕೂ ಕೇರ್ ಮಾಡದೇ, ಚೆಂದದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

sushmitha sen

ಭುವನ ಸುಂದರಿ ಸುಶ್ಮಿತಾ ಸೇನ್, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದ್ದಾರೆ. ಲಲಿತ್ ಮೋದಿ ಜತೆಗಿನ ಡೇಟಿಂಗ್ ಕುರಿತು ಸಖತ್ ಸುದ್ದಿಯಲ್ಲಿದ್ದಾರೆ. ಇವರಿಬ್ಬರ ವಯಸ್ಸಿನ ಅಂತರದ ಬಗ್ಗೆ. ದುಡ್ಡಿಗಾಗಿ ಪ್ರೀತಿ ಮಾಡುವ ಮಹಿಳೆ, ಗೋಲ್ಡ್ ಡಿಗ್ಗರ್ ಅಂತೆಲ್ಲಾ ಟ್ರೋಲ್ ಮಾಡಿದ್ದರು. ಕೆಟ್ಟ ಕಾಮೆಂಟ್‌ಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಹಾಯಾಗಿ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಮೂಲಕ ಸುಶ್ಮಿತಾ ಸೇನ್, ಮಿಂಚ್ತಿದ್ದಾರೆ. ಇದನ್ನೂ ಓದಿ:ಕೇಕ್ ಕತ್ತರಿಸುವ ಮೂಲಕ 17 ವರ್ಷದ ಸಿನಿಪಯಣದ ಸಂಭ್ರಮ ಆಚರಿಸಿದ ಅನುಷ್ಕಾ ಶೆಟ್ಟಿ

 

View this post on Instagram

 

A post shared by Sushmita Sen (@sushmitasen47)

ಬಿಂದಾಸ್ ಆಗಿ ಫೋಟೋಗೆ ಪೋಸ್ ನೀಡುತ್ತ, ಖುಷಿ ಖುಷಿಯಾಗಿ ದಿನ ಕಳೆಯುತ್ತಿದ್ದಾರೆ. ಫೋಟೋ ಮೂಲಕ ತಮ್ಮ ಜೀವನದ ಬಗ್ಗೆ ನೀಡುತ್ತಿದ್ದಾರೆ. ಶೀಘ್ರದಲ್ಲೇ ಲಲಿತ್ ಮೋದಿ ಜತೆ ವೈವಾಹಿಕ ಬದುಕಿಗೆ ಕಾಲಿಡುತ್ತಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರಿಂದಲೇ ಅಧಿಕೃತ ಮಾಹಿತಿ ಸಿಗಬೇಕಿದೆ. ಇನ್ನು ನೀಲಿ ಬಣ್ಣದ ಟಾಪ್ ಧರಿಸಿರುವ ಫೋಟೋ ಶೇರ್ ಮಾಡಿ, ನಗು ಮುಖದಿಂದ ಪೋಸ್ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article