ಕೇಕ್ ಕತ್ತರಿಸುವ ಮೂಲಕ 17 ವರ್ಷದ ಸಿನಿಪಯಣದ ಸಂಭ್ರಮ ಆಚರಿಸಿದ ಅನುಷ್ಕಾ ಶೆಟ್ಟಿ

ದಕ್ಷಿಣದ ಸಿನಿಮಾರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಬದುಕಿಗೆ ಇಂದು 17 ವರ್ಷಗಳ ಸಂಭ್ರಮ. ನಾಯಕಿಯಾಗಿ ಹಲವು ಬಗೆಯ ಪಾತ್ರಗಳ ಮೂಲಕ ರಂಜಿಸಿರುವ ಸ್ವೀಟಿ ಸಿನಿಪಯಣಕ್ಕೆ 17 ವರ್ಷವಾಗಿದೆ. ಇದೇ ಖುಷಿಯಲ್ಲಿ ಅನುಷ್ಕಾ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
17 ವರ್ಷಗಳಿಂದ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ, ಭಿನ್ನ ಪಾತ್ರಗಳ ಮೂಲಕ ಮನರಂಜಿಸಿದ್ದಾರೆ. ಮಹಾನ್ ನಟಿ ಅನುಷ್ಕಾ ಸದ್ಯ ತಮ್ಮ ಹೊಸ ಚಿತ್ರತಂಡದೊಂದಿಗೆ 17 ವರ್ಷದ ಸಿನಿ ಬದುಕನ್ನ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ `ಸೂಪರ್’ ಚಿತ್ರದ ಮೂಲಕ ಟಾಲಿವುಡ್ ಅಂಗಳಕ್ಕೆ ನಾಯಕಿಯಾಗಿ ಪರಿಚಿತರಾದ್ದರು. ತೆಲುಗು ಮತ್ತು ತಮಿಳು ಚಿತ್ರಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಸ್ವೀಟಿ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.
View this post on Instagram
`ಬಾಹುಬಲಿ’ ಚಿತ್ರದ ದೇವಸೇನಾ ಆಗಿ ವರ್ಲ್ಡ್ ವೈಡ್ ಗುರುತಿಸಿಕೊಂಡ ನಟಿ, ಸದ್ಯ ನವೀನ್ ಪೋಲಿ ಶೆಟ್ಟಿಗೆ ನಾಯಕಿಯಾಗಿ ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಇದೇ ಚಿತ್ರತಂಡದ ಜತೆ ಕೇಕ್ ಕತ್ತರಿಸಿ 17 ವರ್ಷದ ಸಿನಿಬದುಕಿನ ಪಯಣವನ್ನ ನಟಿ ಅನುಷ್ಕಾ ಶೆಟ್ಟಿ ಸ್ಮರಿಸಿದ್ದಾರೆ. ನೆಚ್ಚಿನ ನಟಿಯ ಸಿನಿ ಬದುಕಿಗೆ ಫ್ಯಾನ್ಸ್ ಕೂಡ ಶುಭಹಾರೈಸಿದ್ದಾರೆ.
Live Tv