Food

ಕೃಷ್ಣಾ ಜನ್ಮಾಷ್ಟಮಿಗೆ ಮಾಡಿ ಡ್ರೈ ಫ್ರೂಟ್ಸ್ ಲಡ್ಡು

Published

on

Share this

ಕೃಷ್ಣಾ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಸಿಹಿ ಮಾಡಿ ಸವಿಯುತ್ತಾರೆ. ಅದರಂತೆ ಅಗಸ್ಟ್ 30ಕ್ಕೆ ಆಚರಿಸುವ ಕೃಷ್ಣಾ ಜನ್ಮಾಷ್ಟಮಿಗೆ ಲಡ್ಡು ಮಾಡಿ ಸೇವಿಯಿರಿ.

ಹಬ್ಬಕ್ಕಾಗಿ ನಾನಾ ತರಹದ ಸಿಹಿ ತಿಂಡಿಗಳನ್ನು ಮಾಡಬೇಕಾಗುತ್ತದೆ. ಆಗ ನೀವು ಮಾಡುವ ಸಿಹಿ ಅಡುಗೆಯಲ್ಲಿ ಡ್ರೈ ಫ್ರೂಟ್ಸ್ ಲಡ್ಡನ್ನು ಸೇರಿಸಿಕೊಳ್ಳಬಹುದಾಗಿದೆ. ಈ ಸಿಹಿ ತಿಂಡಿಯನ್ನು ಒಣಗಿದ ಹಣ್ಣುಗಳಿಂದ ಮಾಡುವುದರಿಂದ ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಈ ಸ್ವೀಟ್‍ನ್ನು 15 ರಿಂದ 20 ದಿನಗಳಕಾಲ ನೀವು ಇಟ್ಟು ತಿನ್ನಬಹುದಾಗಿದೆ. ಇದನ್ನೂ ಓದಿ:  ಭಾನುವಾರದ ಬಾಡೂಟಕ್ಕೆ ಮಾಡಿ ನೋಡಿ ಪೋರ್ಕ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು

* ದ್ರಾಕ್ಷಿ- ಅರ್ಧ ಕಪ್
* ಬಾದಾಮಿ- ಅರ್ಧ ಕಪ್
* ಗೋಡಂಬಿ- ಅರ್ಧ ಕಪ್
* ಖರ್ಜೂರ- ಅರ್ಧ ಕಪ್
* ಪಿಸ್ತಾ- ಅರ್ಧ ಕಪ್
* ತುಪ್ಪ-2 ಟೇಬಲ್ ಸ್ಪೂನ್
* ಗಸಗಸೆ-1 ಟೇಬಲ್ ಸ್ಪೂನ್
* ಏಲಕ್ಕಿ ಪುಡಿ-1 ಟೀ ಸ್ಪೂನ್
* ಬೆಲ್ಲ- ಅರ್ಧ ಕಪ್
* ಎಳ್ಳು- ಅರ್ಧ ಕಪ್
* ಬಾದಾಮಿ- ಅರ್ಧ ಕಪ್
* ಒಣ ಕೊಬ್ಬರಿ- ಅರ್ಧ ಕಪ್

ಮಾಡುವ ವಿಧಾನ:

* ಒಂದು ಬಾಣಲೆಗೆ ಎಳ್ಳು, ಗಸಗಸೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
* ಬಾಣಲೆಯಲ್ಲಿ ಒಂದು ಟೇಬಲ್ ಸ್ಪೂನ್ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾವನ್ನು ಹಾಕಿ ಚೆನ್ನಾಗಿ ಹುರಿಯ ಬೇಕು.

* ನಂತರ ಮಿಕ್ಸಿ ಜಾರ್‍ಗೆ ಒಣಗಿದ ಕೊಬ್ಬರಿ ಹಾಗೂ ಹುರಿದ ಡ್ರೈ ಫ್ರೂಟ್ಸ್, ಖರ್ಜೂರ, ಬೆಲ್ಲವನ್ನು ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ.

* ನಂತರ ಈ ಡ್ರೈ ಫ್ರೂಟ್ಸ್ ಮಿಶ್ರಣಕ್ಕೆ ಈ ಮೊದಲು ಹುರಿದು ತೆಗೆದಿಟ್ಟ ಎಳ್ಳು, ಗಸಗಸೆ ಹಾಕಿ ಮಿಶ್ರಣವನ್ನು ಮಾಡಿ ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ರುಚಿಯಾ ದ ಡ್ರೈ ಫ್ರೂಟ್ಸ್ ಲಾಡು ಸವಿಯಲು ಸಿದ್ಧವಾಗುತ್ತದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications