ಡಿಯರ್ ಸುಶ್ಮಿತಾ
ಇವತ್ತು ಕೃಷ್ಣ ಜನ್ಮಾಷ್ಠಮಿ. ನೆನಪಿದೆಯಾ? ಹಿಂದೊಮ್ಮೆ ನಮ್ಮೂರಲ್ಲಿ ಕೃಷ್ಣ ಜನ್ಮಾಷ್ಠಮಿನ ಅದೆಷ್ಟು ಗ್ರ್ಯಾಂಡ್ ಆಗಿ ಆಚರಣೆ ಮಾಡಿದ್ವಿ. ನೀನು ರಾಧೆಯ ಡ್ರೆಸ್‌ಲ್ಲಿ ಅದೆಷ್ಟು ಮುದ್ದಾಗಿ ಕಾಣಿಸ್ತಿದ್ದೆ. ಪುಟ್ಟ ಬೆಣ್ಣೆ ಗಡಿಗೆ, ಕೊಳಲು, ಮುದ್ದಾದ ಗೋಪಿಕೆ ಥರ ಕಾಣ್ತಿದ್ದೆ ನೀನವತ್ತು.
ಆ ದಿನ ಅದೆಷ್ಟು ಜನರ ಕಣ್ಣು ಬಿದ್ದಿತ್ತೋ ಏನೋ? ಆಮೇಲೆ ನಿನಗೆ ಜ್ವರನೂ ಬಂದಿತ್ತು. ಅದಾದ ಮೇಲೆ ಮುದ್ದಾಗಿ ಡ್ರೆಸ್ ಮಾಡ್ಕೊಂಡಾಗೆಲ್ಲ ನಿನ್ನ ಗಲ್ಲದ ಮೇಲೆ ಒಂದು ಚುಕ್ಕಿ ಇರುತ್ತಿತ್ತು. ಅದು ಯಾರ ದೃಷ್ಠಿ ತಾಕದೇ ಇರಲಿ ಅಂತ. ಆದರೆ ಆದರ ಮೇಲೆ ನನ್ನ ದೃಷ್ಟಿ ಬಿತ್ತು ನೋಡು! ಆ ಚುಕ್ಕಿ ಕಾಡಿದಷ್ಟು ನನ್ನನ್ನ ಯಾವ ವಿಚಾರವೂ ಕಾಡಿಲ್ಲ! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಒಮ್ಮೆ ನೀನು ಕ್ಲಾಸ್‌ಗೆ ಬರ್ತ್ ಡೇ ದಿನ ಲಂಗ ದಾವಣಿ ತೊಟ್ಟು ಬಂದಾಗ ಮತ್ತದೇ ನನ್ನ ರಾಧೆ ಸಿಕ್ಕಿದ್ದು. ಆದರೆ ಅವತ್ತು ನೀನು ಆ ಚುಕ್ಕಿನ ಮರೆತು ಬಿಟ್ಟಿದ್ದೆ. ಗಲ್ಲ ಅದೆಷ್ಟು ಖಾಲಿ ಖಾಲಿ ಅನ್ಸೋದು ಗೊತ್ತಾ? ಅದಕ್ಕೆ ನೀನು ಎಲ್ಲರಿಗೂ ಸ್ವೀಟ್ ಹಂಚಿ ನನ್ನ ಬಳಿ ಬಂದಾಗ ಬ್ಲಾಕ್ ಪೆನ್ ತಗೊಂಡು ಚುಕ್ಕಿ ಇಡ್ಲಾ ಅಂತ ಕೇಳಿದ್ದು! ನೀನೋ ಉಹೂಂ ಅಂದಿದ್ದೆ. ಆದ್ರೆ.. ಅಲ್ಲೆಲ್ಲೋ ಹೋಗಿ ಆ ಚುಕ್ಕಿ ಇಟ್ಕೊಂಡು ಕರೆದು ತೋರ್ಸಿದ್ದೆ.
ಬಹುಶಃ ಅವತ್ತು ನೀನು ಚುಕ್ಕಿ ಇಟ್ಟಿದ್ದು ಕೇವಲ ನಿನ್ನ ಗಲ್ಲದ ಮೇಲಲ್ಲ. ನನ್ನ ಹೃದಯದ ಮೇಲೆ. ಅದು ಪ್ರೇಮ ಗಂಧದ ಗುರುತು..! ಬಹುಶಃ ಇವತ್ತು ಈ ಪತ್ರ ಓದುವಾಗ ಅದೆಲ್ಲ ನಿನಗೆ ನೆನಪಾಗಬಹುದು. ಅಂತಹ ಮತ್ತೊಂದು ಕೃಷ್ಣ ಜನ್ಮಾಷ್ಠಮಿ ಇವತ್ತು ಆಗಲಿ.
ಇವತ್ತು ಹಬ್ಬಕ್ಕೆ ಊರಿಗೆ ಬರ್ತಿದಿನಿ. ಚೆಂದ ಚೆಂದ ಡ್ರೆಸ್ ಮಾಡ್ಕೊಂಡು ರೆಡಿಯಾಗಿರು. ಹಣೆಯ ಮೇಲೆ ರಾಧೆಯ ಪುಟ್ಟ ಕುಂಕುಮ, ಗಲ್ಲದ ಮೇಲೆ ದೃಷ್ಠಿಬೊಟ್ಟು.. ಗೊಂಬೆ ಥರ ರೆಡಿಯಾಗಿರು ಆಯ್ತಾ..! ಇದನ್ನೂ ಓದಿ: ನದಿಗೆ ಅದೆಷ್ಟೇ ತಡೆ ಇದ್ದರೂ ಸಮುದ್ರ ಸೇರದೇ ಇರುವುದೇ?
ನಿನ್ನಂದವ ಕಣ್ತುಂಬಿಕೊಳ್ಳಲು ಬರುವ
ನಿನ್ನ ಮುದ್ದುಕೃಷ್ಣ
