ಬೆಂಗಳೂರು: ನಿನ್ನೆಯಷ್ಟೇ ಆನೆ ಬಂದಿದ್ದ ಜಾಗದ ಹತ್ತಿರದಲ್ಲೇ ಇದೀಗ ಚಿರತೆ (Leopard) ಕಾಣಿಸಿಕೊಂಡಿದೆ.
ಆಂಚೆಪಾಳ್ಯದ ನಿರ್ಜನ ಪ್ರದೇಶದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ. ಚಿರತೆ ಓಡಾಟದ ದೃಶ್ಯವನ್ನು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗಳು ಸೆರೆಹಿಡಿದ್ದಾರೆ. ಇದನ್ನೂ ಓದಿ: ಮಲ್ಲೇಶ್ವರಂನಲ್ಲಿ ಮರ ಬಿದ್ದು ವಾಹನಗಳು ಜಖಂ – ದಿನ ಮಲಗೋ ಹಾಗೆ ಕಾರಲ್ಲೇ ಮಲಗಿದ್ರೆ ನನ್ನ ಕತೆ ಅಷ್ಟೇ ಎಂದ ಚಾಲಕ!
ನಿನ್ನೆಯಷ್ಟೇ ಕಾಡಾನೆಯೊಂದು (Elephant) ನಗರಕ್ಕೆ ಬಂದು ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿತ್ತು. ಬಳಿಕ ಅರಣ್ಯ ಅಧಿಕಾರಿಗಳು ಡ್ರೋನ್ ಬಳಸಿ, ಕಾಡಾನೆಯನ್ನು ವಾಪಸ್ ಬನ್ನೇರುಘಟ್ಟ ಕಾಡಿಗಟ್ಟಿದ್ದಾರೆ. ಇದರ ಬೆನ್ನಲ್ಲೇ ಚಿರತೆ ಕಾಣಿಸಿಕೊಂಡಿದೆ. ನಗರದಲ್ಲಿ ಪದೇ ಪದೇ ವನ್ಯಜೀವಿಗಳು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

