ಹಾಯ್ ಡಿಯರ್
ನೀನು ನನ್ನ ಪ್ರೇಮವನ್ನ ಅದೆಷ್ಟು ಪರೀಕ್ಷೆ ಮಾಡ್ತೀಯಾ? ಮತ್ತೆ ಮತ್ತೆ ನಿನ್ನ ಮಾತುಗಳಲ್ಲಿ ಅದೆಷ್ಟೊಂದು ಪ್ರಶ್ನೆಗಳು. ಒಳ್ಳೇ ಚಿಕ್ಕ ಮಕ್ಕಳಿಗೆ ಟೀಚರ್ ಕೇಳೋ ರೀತಿ. ಎಲ್ಲಾ ಡಬ್ಬಾ ಡೌಟ್.. ನಿನ್ನದು..!
ನಿನ್ನ Question ಪೇಪರ್ ಇದೇ.. ʻನನ್ನನ್ನ ಬಿಟ್ಟು ಹೋಗಲ್ಲ ಅಲ್ವಾ? ಯಾರಾದ್ರೂ ನಾನು ಸರಿ ಇಲ್ಲ ಅಂದ್ರೆ ನಂಬಿ ದೂರ ಆಗ್ಬಿಡ್ತೀಯಾ? ನನಗಿನ್ನೂ ನಿನ್ನಷ್ಟು ಸಂಬಳ ಸಿಗೋ ಕೆಲಸ ಸಿಕ್ಕಿಲ್ವಲ್ಲ.. ಆದ್ರೂ ನನ್ನ ಮೇಲೆ ಪ್ರೀತಿ ಇದಿಯಾ..?ʼ ಇದಕ್ಕೆಲ್ಲ ಯಾಕೆ ಒಂದು ಪತ್ರ, ಇಂಕ್‌ನ್ನೆಲ್ಲ ಹಾಳು ಮಾಡ್ತಿಯೋ ಏನೋ ನೀನು. ಅವಕ್ಕೆಲ್ಲ ನಾನು ಏನಂತ ಉತ್ತರ ಕೊಡಲಿ ಹೇಳು? ಇದನ್ನೂ ಓದಿ: ಹೇ ಗೆಳೆಯ.. ಅವನಿಗಿಂತ ನೀನೇ ಮೊದಲು ಸಿಗಬಾರದಿತ್ತಾ?
ನಾನು ನಿನ್ನನ್ನ ತುಂಬಾ ಪ್ರೀತ್ಸಿದಿನಿ. ನೀನು ನನ್ನ ತುಂಬಾ ಪ್ರೀತಿಸ್ತಿದಿಯ. ಈ ಪ್ರೀತಿ ನಮ್ಮಿಬ್ಬರನ್ನೇ ಆಯ್ಕೆ ಮಾಡ್ಕೊಂಡಿದೆ ನೋಡು. ಹೀಗಿದ್ದಾಗ ನಾವ್ಯಾಕೆ ಏನೇನೋ ಯೋಚನೆ ಮಾಡ್ಬೇಕು ಅಲ್ವಾ?ಎಷ್ಟೋ ಜನರು ಪ್ರೀತಿಯನ್ನು ಸೊಕ್ಕಿಂದ ಒದ್ದು ಹೋಗಿ ಸಂಕಟ ಪಡೋದನ್ನ ನೋಡಿದಿನಿ. ಹೀಗಿರುವಾಗ, ಸದಾ ನನ್ನ ಖುಷಿಯನ್ನೇ ಬಯಸುವ ನಿನ್ನನ್ನ ಮೇಲೆ ಕೇಳಿರೋ ಪ್ರಶ್ನೆಗಳಿಗೆಲ್ಲ.. ಉತ್ತರವಾಗಿ ದೂರ ಮಾಡೋಕಾಗುತ್ತಾ?
ಈ ಪ್ರೀತಿಯ ದಾರಿಯಲ್ಲಿ ಅದೆಷ್ಟೇ ಅಡೆತಡೆಗಳಿದ್ರೂ ನಾನು ನಿನ್ನನ್ನ ಬಂದು ಸೇರೇ ಸೇರ್ತಿನಿ ಅನ್ನೋ ಬಲವಾದ ನಂಬಿಕೆ ನನಗಿದೆ. ಒಂದು ನದಿಗೆ ಅದೆಷ್ಟೇ ಅಡೆ ತಡೆ, ಡ್ಯಾಮ್ ಅಂತೆಲ್ಲ ಕಟ್ಟಿದ್ರೂ ಅದು ಸಾಗರ ಸೇರದೇ ಇರುತ್ತಾ? ನನ್ನ ಪ್ರೀತಿನೂ ಹಾಗೆ. ಇದನ್ನೂ ಓದಿ: ನನಗೀಗ ಜೀವನ ಅಂತ ಬೇರೆ ಏನಿಲ್ಲ ಆಶಾ..!
ಇದನ್ನೇ ಕವಿ ಮೆಹಬೂಬ್ ಆಲಂ ಕೊತ್ವಾಲ್
ʻIn pyaar ki raahon mein patthar hain kitane
Un sab ko he paar kiya
Ek nadi hoon main chaahat bhari aaj milne
Saagar ko aayi yahaan – ಈ ಸಾಲುಗಳಲ್ಲಿ ವರ್ಣಿಸಿದ್ದು..
ನಿನಗೊತ್ತಾ ನಮ್ಮಿಬ್ರಿಗೂ ನಮ್ಮ ಹೆಸರು, ಕೆಲಸ ಮಾಡೋ ಜಾಗ, ನಮ್ಮ ಕುಟುಂಬದ ವಿವರ ಬಿಟ್ಟು ಪರಸ್ಪರ ಜಾತಿ, ಜಾತಕದ ಅರಿವೂ ಇಲ್ಲ. ಹೀಗಿದ್ದಾಗ ಬಾಕಿದೆಲ್ಲ ಹೇಗೆ ತಡೆ ಆಗ್ಬಿಡುತ್ತೆ. ಪ್ರೀತಿಗೆ ಯಾವ ತಡೆಯೂ ಇಲ್ಲ.. ಪ್ರೀತಿ ಅಂದ್ರೆ ನಂಬಿಕೆ ಮಾತ್ರ. ಇದನ್ನೂ ಓದಿ: ನಿನ್ನ ಮುದ್ದಿನ ಪೆಟ್ಟುಗಳಿಗಾಗಿ ಕಾಯುವ..!
ಇಂತಿ ನಿನ್ನ ಹೃದಯವನ್ನೇ ನಂಬಿದ ಗೆಳತಿ

