ಮೈ ಡಿಯರ್ ಫ್ರೆಂಡ್
ನೀನು ನನಗೆ ಫ್ರೆಂಡಾ? ನನಗ್ಯಾಕೋ ಇತ್ತೀಚೆಗೆ ಈ ಪ್ರಶ್ನೆ ತುಂಬಾ ಕಾಡುತ್ತೆ. ಆಗೆಲ್ಲ ನಿನ್ನ ಮೇಲೆ ತುಂಬಾ ಕೋಪ ಬರುತ್ತೆ. ಮೇಘರಾಜ್‌ಗಿಂತ ನೀನೇ ಮೊದಲು ನನಗೆ ಸಿಗಬಾರದಿತ್ತಾ ಅಂತ ಅನ್ಸುತ್ತೆ. ಈಗಾಗಲೇ ನಾನು ಅವನನ್ನ ಒಪ್ಪಿಕೊಂಡು ಬಿಟ್ಟಿದಿನಲ್ಲ, ಆದ್ರೂ ಯಾಕೆ ಈ ಮನಸ್ಸಿಗೆ ಇಷ್ಟೊಂದು ತಳಮಳ?
ಕೆನೆ ಕಾಫಿಯ ಕಪ್‌ಲ್ಲಿ ನಿನ್ನ ಬಿಂಬ ಕಾಣುವಷ್ಟು ಆಪ್ತನಾಗಿದ್ದು ಸರಿನಾ? ಅಥವಾ ಆ ಕಪ್ ನಿನ್ನದೇ ತುಟಿ ಎಂದು ಆಸ್ವಾದಿಸಿದ್ದು ನನ್ನ ತಪ್ಪಾ? ನನಗೆ ಉತ್ತರವೇ ಸಿಗ್ತಿಲ್ಲ. ಇದನ್ನೂ ಓದಿ: ನನಗೀಗ ಜೀವನ ಅಂತ ಬೇರೆ ಏನಿಲ್ಲ ಆಶಾ..!
ನಾ ಪ್ರೀತಿಯೊಳಗೋ
ಪ್ರೀತಿ ನನ್ನೊಳೊಗೋ,
ಪ್ರೀತಿ ಪ್ರೇಮದ ಬಲೆ ಬದುಕಿನೊಳಗೋ…!


ಅದೆಷ್ಟು ಚಡಪಡಿಸಿದ್ದೇನೆ ಗೊತ್ತಾ? ಅದೆಲ್ಲಾ ನನ್ನ ತಲೆದಿಂಬಿಗೆ, ನನ್ನ ಮುದ್ದು ಟೆಡ್ಡಿ ಪಿಕಾಚುಗೆ ಗೊತ್ತು. ನಿನಗೆ ಇದೆಲ್ಲ ಹೇಗೆ ಗೊತ್ತಾಗುತ್ತೆ ಹೇಳು? ಅವನು ಈ ವಿಚಾರ ಯಾರಿಗೂ ಹೇಳಲ್ಲ. ಅದಕ್ಕೆ ಇದನ್ನೆಲ್ಲ ಅವನಿಗೆ ಹೇಳಿದಿನಿ. ಅವನು ಲೂಸ್.. ಯಾವ ಫೀಲಿಂಗ್ ಇಲ್ದೇ ನಗ್ತಾನೇ ಇರ್ತಾನೆ.
ಈಗ ಹೇಳು? ಒಂದು ಪ್ರೀತಿಗೆ ಸಿಕ್ಕು, ಎಲ್ಲೋ ಮತ್ತೊಂದು ಕಡೆ ಮನಸ್ಸು ಜಾರುವುದು ತಪ್ಪಾ? ನನಗೆಲ್ಲೋ ಏನೋ ಕೊರತೆ ಇತ್ತು. ಅದನ್ನು ನೀನ್ಯಾಕೆ ಫಿಲ್ ಮಾಡ್ದೆ? ಅವನಿಗಿಂತಲೂ ನೀನ್ಯಾಕೆ ಹೃದಯದಲ್ಲಿ ಎತ್ತರಕ್ಕೆ ಏರಿದೆ? ಇದು ನೈತಿಕತೆಗೂ ಮೀರಿದ ಪ್ರಶ್ನೆಯಾ? ಇಲ್ಲಿ ನನ್ನದೇನಾದ್ರೂ ತಪ್ಪಿದಿಯಾ? ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ಈ ಪ್ರಶ್ನೆಗಳಿಗೆಲ್ಲ ನಿನಗೆ ಉತ್ತರ ಹೇಳೋಕೆ ಸಾಧ್ಯಾನಾ? ಅಥವಾ ನಾನ್ಯಾಕೆ ಈ ಪ್ರಶ್ನೆಗಳನ್ನೆಲ್ಲ ನಿನ್ನ ಮುಂದಿಟ್ಟೆ? ಈ ಪ್ರಶ್ನೆಗಳಿಗೆಲ್ಲ ನಿನ್ನ ಬಳಿ ನಾನು ಯಾವ ವೇದಾಂತದ ಉತ್ತರವನ್ನು ಕೇಳಲ್ಲ. ನೀನು ಫ್ರೇಂಡ್ ಆಗಿನೇ ಇರು. ಆದ್ರೆ ನನ್ನ ಮನಸ್ಸಲ್ಲಿ ಮಾತ್ರ ನೀನು ಮೇಘನಿಗೂ ಮೊದಲೇ ನನಗೆ ಸಿಗಬೇಕಿತ್ತು ಅನ್ನೋ ಆಸೆ ನಿರಂತರವಾಗಿನೇ ಇರುತ್ತೆ. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ
ನಿನ್ನಿಂದ ಏನನ್ನೂ ನಿರೀಕ್ಷಿಸದೇ ನಿನ್ನನ್ನೇ ಜಪಿಸುವವಳು

