ಡಿಯರ್ ಅಂಬಿಕಾ
ನಿನ್ನೊಂದಿಗೆ ಮಾತಾಡಿದ ಅದೆಷ್ಟೋ ಮಾತುಗಳು ಗಾಳಿಯಲ್ಲಿ ಉಳಿದು ಬಿಟ್ಟಿವೆ. ಗೊತ್ತಾ ನಿನಗೆ, ನಾವಾಡಿದ ಮಾತುಗಳು ಎಲ್ಲೂ ಹೋಗಲ್ಲ ಅವೆಲ್ಲ ಈ ಜಗತ್ತಿನ ಯಾವುದೋ ಮೂಲೆಯಲ್ಲಿ ಉಳಿದುಕೊಂಡಿರುತ್ತವೆ. ಕಾಲ ಬಂದಾಗ ಮತ್ತೆ ನಮ್ಮ ಎದೆಗಳಿಗೆ ವಾಪಸ್ ಬರುತ್ತವೆ!
ಅದಕ್ಕೆ ನಾವಾಡಿದ ಮಾತುಗಳು, ಕೆಲಸಗಳು ನೆನಪುಗಳಾಗಿ ಮತ್ತೆ ಮತ್ತೆ ಕಾಡುತ್ತವೆ. ಅದಕ್ಕೆ ನಿನ್ನ ಜೊತೆ ನಾನಾಡಿದ ತುಂಟಾಟಗಳು ಇಂದಿಗೂ ಕನಸುಗಳಾಗಿ ಕಾಡೋದು. ಯಾವುದೋ ಹಾಡಿನ ಭಾವಕ್ಕೂ ನೀನೇ ಬಂದು ನಿಲ್ಲೋದು. ಇದನ್ನೂ ಓದಿ: ನನಗೀಗ ಜೀವನ ಅಂತ ಬೇರೆ ಏನಿಲ್ಲ ಆಶಾ..!

ತುಂಟಾಟ ಅನ್ನೋದಕ್ಕೂ ನೆನಪಾಯ್ತು.. ನಿನ್ನನ್ನ ಆಗೆಲ್ಲ ಎಷ್ಟು ಗೋಳುಹೊಯ್ಕೊಳ್ತಿದ್ದೆ ಅಲ್ವಾ? ನೀನು ಏನು ಮಾತಾಡಿದ್ರೂ ನಾನದಕ್ಕೆ ಪೋಲಿ ಉತ್ತರಾನೇ ಕೊಡ್ತಿದ್ದೆ. ಅದಕ್ಕೆಲ್ಲ ನೀನು, ʻಪೆಟ್ಟು ಬೇಕಾ?ʼ ಅಂತ ಅದೆಷ್ಟು ಮುದ್ದಾಗಿ ಕೇಳ್ತಿದ್ದೆ. ನಾನಾಗ ಹೂಂ.. ಮುದ್ದಿನ ಪೆಟ್ಟು ಬೇಕು ಅಂತಿದ್ದೆ. ಆಗ ನಿನ್ನ ಮುಖದಲ್ಲಿ ಬರೋ ನಾಚಿಕೆಯ ನಗುವಿನ ರಂಗು.. ಅದ್ಯಾವ ಹೂದೋಟದ ಹೂವಿಗೂ ಇಲ್ಲ ಬಿಡು..! ಇದನ್ನೂ ಓದಿ: ಮನಸ್ಸಿಗೆ ತುಂಬಾ ಇಷ್ಟವಾದವನು ನೀನು..!
ಹೌದು.. ಅಷ್ಟೆಲ್ಲ ನಾಚಿಕೆ ಇದ್ದವಳು.. ನನ್ನನ್ನು ಬಿಗಿದಪ್ಪಿ ಮೊದಲು ಕೊಟ್ಟ ಮುತ್ತು.. ಅದೆಷ್ಟು ಚೆಂದದ್ದು. ಈಗಲೂ ಅದು ನೆನಪಾಗುತ್ತೆ. ಮೊದಲ ಮಳೆಯ ಮಣ್ಣಿನ ಗಂಧದ ಕಂಪಂತೆ ಕಾಡುತ್ತೆ. ಈಗಲೂ ಆ ರುಚಿ ಈ ತುಟಿಗಳಿಗೆ ಸಿಗುತ್ತೆ. ಈ ಸಾಲುಗಳನ್ನು ಓದುವಾಗ ನಿನ್ನ ಮುಖ ನನಗೆ ಈಗಲೇ ಕಣ್ಣಿಗೆ ಕಟ್ಟುತ್ತಿದೆ! ಇದನ್ನೂ ಓದಿ: ಪ್ರತಿ ಮಳೆಗೂ ನೀನಿಟ್ಟ ನೆನಪು ಅದೆಷ್ಟು ಶಾಶ್ವತ..!

ಹೀಗೆಲ್ಲ ಹಳೆಯ ನಮ್ಮ ಒಲವಿನಾಟಗಳು ನೆನಪಾದಗೆಲ್ಲ, ಮದುವೆ, ಬಂಧ.. ಸಮಾಜದ ಯಾವ ಪಂಜರವಿಲ್ಲದೆ ನಾವು ರಮಿಸುವ ಈ ಪ್ರೇಮಲೋಕವೇ ನಿಜವಾದ ಜಗತ್ತು ಅಂತ ನನಗೆ ಅನ್ಸುತ್ತೆ. ಈ ಬಂಧಗಳಿಗೆ ಕಟ್ಟುಬಿದ್ದವರ ಬಳಿ ನಮ್ಮಷ್ಟು ನೆಮ್ಮದಿಯ ಖುಷಿ ನಿಜವಾಗಲೂ ಇಲ್ಲ, ಹೀಗೇ ಇದ್ದಷ್ಟು ಕಾಲ ಪ್ರೇಮದ ಪುಂಡಾಟದಲ್ಲೇ ಕಳೆಯಬೇಕು ಅಲ್ವಾ..? ನನಗೊತ್ತು.. ಈ ಮಾತು ಕೇಳಿ, ಪೆಟ್ಟು ಬೇಕಾ? ಅಂತ ಕೇಳ್ತಿಯಾ ಅಂತ.. ಹೌದು.. ನಿನ್ನ ಮುತ್ತಿನ ಪೆಟ್ಟುಗಳಿಗಾಗಿನೇ ಈ ಸಾಲುಗಳು ಗೆಳತಿ. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ ನಿನ್ನ ಮುದ್ದಿನ.. ಮುತ್ತಿನ ಪೆಟ್ಟಿಗಾಗಿ ಕಾಯುವ
ಒಲವಿನ ಗೆಳೆಯ
