-ಆ.1ರಿಂದ ತ್ಯಾಜ್ಯದಿಂದ ಸ್ವಾತಂತ್ರ‍್ಯ ಅಭಿಯಾನ
-ಸಿ&ಡಿ ವೇಸ್ಟ್ ಸಾಗಿಸುವ ವಾಹನಗಳಿಗೆ ಜಿಪಿಎಸ್ ಕಡ್ಡಾಯ
ಬೆಂಗಳೂರು: ಆಪರೇಷನ್ ಫುಟ್‌ಪಾತ್ ಬಳಿಕ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಆಪರೇಷನ್ ಜೆಸಿಬಿಗೆ ಮುಂದಾಗಿದ್ದಾರೆ. ಜೆಸಿಬಿ ಅಂದ್ರೆ ಜಸ್ಟ್ ಕ್ಲೀನ್ ಬೆಂಗಳೂರಿಗೆ (Just Clean Bengaluru) ಕೃಷ್ಣ ಬೈರೇಗೌಡ ಕರೆ ಕೊಟ್ಟಿದ್ದಾರೆ.
ಡೆಬ್ರಿಸ್‌ಗಳನ್ನು ವಿಲೇವಾರಿ ಮಾಡಲು ಹೊಸ ಕ್ರಮ ಜಾರಿಗೆ ಮುಂದಾಗಿದ್ದು, ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ಜಿಪಿಎಸ್ (GPS) ಕಡ್ಡಾಯಗೊಳಿಸಲಾಗಿದೆ. ಮುಂದಿನ ಆಗಸ್ಟ್ ತಿಂಗಳು ಪೂರ್ತಿ ತ್ಯಾಜ್ಯ ಮುಕ್ತಕ್ಕೆ ಸರ್ಕಾರ ಮುಂದಾಗಿದ್ದು, ಗುರುತು ಮಾಡಿರುವ ಜಾಗದಲ್ಲಿ ಮಾತ್ರ ಕಸ ಹಾಕಲು ಸೂಚಿಸಿದ್ಧಾರೆ. ಇದನ್ನೂ ಓದಿ: ರಾಯರ ಭಕ್ತರಿಗಾಗಿ ಮಂತ್ರಾಲಯದಲ್ಲಿ ಇಂಪೌಂಡಿಂಗ್ ಜಲಾಶಯ ನಿರ್ಮಾಣ: ಸುಬುಧೇಂದ್ರ ತೀರ್ಥರಿಂದ ಭೂಮಿಪೂಜೆ
ಇನ್ಮುಂದೆ ನೋಂದಣಿಯಾಗದ ವಾಹನಗಳಲ್ಲಿ ಕಸ ರವಾನಿಸುವಂತಿಲ್ಲ. ಖಾಸಗಿ ನಿವೇಶನವನ್ನು ಕೂಡ ಮಾಲೀಕರು ಸ್ವಚ್ಛಗೊಳಿಸಬೇಕು. ಇಲ್ಲದೇ ಇದ್ದರೆ ದಂಡಾಸ್ತ್ರ ಪ್ರಯೋಗ ಎಂದು ಎಚ್ಚರಿಸಿದರು. ಒಟ್ಟು 1,600 ಲೋಕೇಷನ್‌ನಲ್ಲಿ 22 ಸಾವಿರ ಟನ್ ಕಸ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನಾಕಾರರಿಗೆ ರಿಲೀಫ್, ಕ್ರಿಮಿನಲ್‌ಗಳ ವಿರುದ್ಧ ತನಿಖೆ: ದೆಹಲಿ ಸರ್ಕಾರ
