– ನಾಪತ್ತೆಯಾಗಿರುವ ಶಾಂತ ಮನೆ ಮೇಲೆ ಸಿಐಡಿ ದಾಳಿ
ಬೆಂಗಳೂರು: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಹಗರಣದಲ್ಲಿ (KPSC Scam) ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಹಾಗೂ ಡೀಲ್‌ಮಾಸ್ಟರ್ ಬಸವರಾಜ್ ಕನ್ನಾಳೆಯನ್ನು (Basavaraj Kannale) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇವತ್ತು ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದರಿಂದ 1ನೇ ಎಸಿಜೆಎಂ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಸದ್ಯ ಕಸ್ಟಡಿಗೆ ಬೇಡ, ಬೇಕಾದ್ರೆ ಮುಂದೆ ಮತ್ತೆ ಕಸ್ಟಡಿಗೆ ಪಡೆಯುವುದಾಗಿ ಸಿಐಡಿ (CID) ಹೇಳಿದೆ. ಹೀಗಾಗಿ ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದನ್ನೂ ಓದಿ: 100 ದಿನದ ಸಂಭ್ರಮಕ್ಕೆ ಬಡವರಿಗೆ ಫ್ರೀ ಸೈಟ್ ಭಾಗ್ಯ – 15 ಲಕ್ಷ ಉಚಿತ ನಿವೇಶನ ಹಂಚಿಕೆಗೆ ಅಸ್ತು!
ಇನ್ನು, ನಾಪತ್ತೆಯಾಗಿರುವ ಕೆಪಿಎಸ್‌ಸಿ ಸದಸ್ಯೆ ಶಾಂತ ಹೊಸಮನಿ ಮನೆ ಮೇಲೆ ಸಿಐಡಿ ದಾಳಿ ನಡೆಸಿದೆ. ನಾಪತ್ತೆಯಾಗಿರೋ ಶಾಂತ ಹೊಸಮನಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಮತ್ತಿಕೆರೆ, ನಾಗರಬಾವಿ ಮನೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಶಾಂತ ಹೊಸಮನಿ ಕಡೆಯಿಂದ ನೇಮಕವಾಗಿರುವ ಅಭ್ಯರ್ಥಿ ಮಮತಾ ಎಂಬವರ ಕಲಬುರಗಿ ನಗರದ ನ್ಯೂ ಓಜಾ ಲೇಔಟ್‌ನಲ್ಲಿರುವ ಮನೆ ಮೇಲೂ ಸಿಐಡಿ ದಾಳಿ ಮಾಡಿದೆ. ಇದನ್ನೂ ಓದಿ: ಕೆಂಪು ಕೋಟೆ ಬ್ಲಾಸ್ಟ್ ಆತ್ಮಾಹುತಿ ದಾಳಿ – ಕಾರಿನೊಳಗೇ ಐಇಡಿ ಸ್ಫೋಟಿಸಿದ್ದ ಉಮರ್; ಎನ್‌ಐಎ ಚಾರ್ಜ್‌ಶೀಟ್
ಶಾಂತಹೊಸಮನಿ, ಮಮತಾ ಇಬ್ಬರೂ ನಿರೀಕ್ಷಣಾ ಬೇಲ್‌ಗೆ ಅರ್ಜಿ ಹಾಕಿದ್ದಾರೆ. ಇನ್ನು, ಬೀದರ್‌ನಲ್ಲಿ ಬಸವರಾಜ್ ಕನ್ನಾಳೆ ಅತ್ಯಾಪ್ತರಿಗೆ ಸಿಐಡಿ ಆತಂಕ ಶುರುವಾಗಿದೆ. ಕನ್ನಾಳೆ ಅಕೌಂಟ್‌ಗೆ ಹಣ ವರ್ಗಾವಣೆ ಮತ್ತು ಹೂಡಿಕೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಪವನ್ ರೆಡ್ಡಿ, ಕಂಪನಿಯ ಮಾಲೀಕರು ಹಾಗೂ ಆರ್‌ಟಿಓ ಇನ್ಸ್ಪೆಕ್ಟರ್ ಆಗಿರುವ ರಾಜಶೇಖರ್ ಚಿದ್ರಿ, ಭಾಲ್ಕಿಯ ಸಹಕಾರಿ ಬ್ಯಾಕ್‌ನ ನಿರ್ದೇಶಕರಾಗಿರುವ ಓಂಕಾರ್‌ಗೆ ಸಿಐಡಿ ಪೊಲೀಸರ ಢವ ಢವ ಶುರುವಾಗಿದೆ. ಇದನ್ನೂ ಓದಿ: ಸುರಕ್ಷತಾ ನಿಯಮ ಉಲ್ಲಂಘನೆ; ಕೋಲ್ಕತ್ತಾದಲ್ಲಿ 919 ಹೋಟೆಲ್, ಗೆಸ್ಟ್‌ಹೌಸ್‌ಗಳು ತಾತ್ಕಾಲಿಕ್ ಬಂದ್
