ಹೈದರಾಬಾದ್‌ನಲ್ಲಿ (Hyderabad) ನಡೆದ ‘ಟಾಕ್ಸಿಕ್’ (Toxic) ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಯಾರಾ ಅಡ್ವಾಣಿ (Kiara Advani) ಕಪ್ಪು ಸೀರೆಯಲ್ಲಿ ಮಿಂಚಿದ್ದಾರೆ. ಸಿಂಪಲ್ ಆಗಿದ್ದರೂ ಕ್ಲಾಸಿ ಲುಕ್‌ನಲ್ಲಿ ಕಾಣಿಸಿಕೊಂಡ ಕಿಯಾರಾ, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.
ಕಿಯಾರಾ ಸಂಪೂರ್ಣ ಕಪ್ಪು ಬಣ್ಣದ ಸೀರೆಯ ಜೊತೆ ಹೈ-ನೆಕ್, ಲಾಂಗ್ ಸ್ಲೀವ್ ಲೇಸ್ ಬ್ಲೌಸ್ ಧರಿಸಿದ್ದರು. ಬ್ಲೌಸ್‌ನ ಡೀಪ್ ನೆಕ್‌ಲೈನ್ ಹಾಗೂ ಶೋಲ್ಡರ್ ಭಾಗದಲ್ಲಿದ್ದ ಕಸೂತಿ ಅವರ ಲುಕ್‌ಗೆ ಬೋಲ್ಡ್ ಟಚ್ ನೀಡಿತ್ತು.
ಕೂದಲನ್ನು ಮಧ್ಯಕ್ಕೆ ಪಾರ್ಟಿಷನ್ ಮಾಡಿ ಸ್ಲೀಕ್ ಬನ್ ಮಾಡಿಕೊಂಡಿದ್ದ ಕಿಯಾರಾ, ಲೈಟ್ ಮೇಕಪ್ ಹಾಗೂ ಸ್ಮೋಕಿ ಐ ಲುಕ್‌ನಲ್ಲಿ ಮಿಂಚಿದ್ದರು. ಹೆವಿ ನೆಕ್‌ಪೀಸ್ ಮತ್ತು ಸ್ಟೇಟ್‌ಮೆಂಟ್ ಡ್ರಾಪ್ ಇಯರಿಂಗ್ಸ್ ಅವರ ಸೀರೆಯ ಲುಕ್‌ಗೆ ಮತ್ತಷ್ಟು ಮೆರುಗು ನೀಡಿತ್ತು.
ಈ ಕಾರ್ಯಕ್ರಮದಲ್ಲಿ ಯಶ್, ರುಕ್ಮಿಣಿ ವಸಂತ್ ಸೇರಿದಂತೆ ‘ಟಾಕ್ಸಿಕ್’ ಚಿತ್ರತಂಡದ ಹಲವು ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಯಶ್ ತೆಲುಗು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿ, ತೋರಿಸಿರುವ ಪ್ರೀತಿ ಮತ್ತು ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ : ಸಂಪೂರ್ಣ ಸ್ವದೇಶಿ ನಿರ್ಮಿತ ಮೊದಲ ಎಕೆ-203 ರೈಫಲ್ ಪರೀಕ್ಷೆ ಯಶಸ್ವಿ
ಇತ್ತೀಚೆಗೆ ಕಿಯಾರಾ ತಮ್ಮ ‘ಟಾಕ್ಸಿಕ್’ ಪಾತ್ರಕ್ಕೆ ಸಂಬಂಧಿಸಿದ ಫೋಟೋವೊಂದನ್ನು ಹಂಚಿಕೊಂಡಿದ್ದರು. ಚಿತ್ರದಲ್ಲಿ ಅವರು ಕಷ್ಟಕರವಾದ ಸರ್ಕಸ್ ಸನ್ನಿವೇಶವೊಂದರಲ್ಲಿ ಕಾಣಿಸಿಕೊಂಡಿದ್ದು, ಹೊಸ ಕೌಶಲ್ಯ ಕಲಿಯುವುದು ಮತ್ತು ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬರುವ ಅನುಭವದ ಬಗ್ಗೆ ಮಾತನಾಡಿದ್ದರು. ಸಿನಿಮಾದ ಪ್ರತಿಯೊಂದು ಹೊಸ ಪಾತ್ರವೂ ಹೊಸದನ್ನು ಕಲಿಸುತ್ತದೆ. ಹೊಸ ಸವಾಲುಗಳನ್ನು ಸ್ವೀಕರಿಸುವುದರಿಂದ ಬೆಳವಣಿಗೆ ಸಾಧ್ಯವಾಗುತ್ತದೆ ಎಂಬರ್ಥದಲ್ಲಿ ಕಿಯಾರಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಜಾನ್ವಿಗೆ ಸಿಹಿ – ಕಹಿ; ಎಲ್ಲಾ ಫ್ಯಾನ್ ಪೇಜ್‌ಗಳಲ್ಲಿನ ಫೋಟೋ ತೆಗೆಸಲು ಕೋರ್ಟ್ ನಕಾರ

