ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವ ಭಾರತದ(India) ಪ್ರಯತ್ನಕ್ಕೆ ಐತಿಹಾಸಿಕ ಯಶಸ್ಸು ಸಿಕ್ಕಿದೆ. ಶೇ. 100 ರಷ್ಟು ಭಾರತೀಯ ಕಚ್ಚಾವಸ್ತು ಹಾಗೂ ಸ್ವದೇಶಿ ಬಿಡಿಭಾಗಗಳಿಂದಲೇ ನಿರ್ಮಿಸಲಾದ ಅತ್ಯಾಧುನಿಕ ಎಕೆ-203(AK-203) ಅಸಾಲ್ಟ್ ರೈಫಲ್‌ನ ಮೊದಲ ಆವೃತ್ತಿಯ ಫೈರಿಂಗ್ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಕೋರ್ವಾ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಸಂಸ್ಥೆಯು ಮೇಕ್ ಇನ್ ಇಂಡಿಯಾ (Make In India) ಯೋಜನೆಯಡಿ ಈ ರೈಫಲ್ ಅನ್ನು ಸಂಪೂರ್ಣವಾಗಿ ದೇಶಿಯವಾಗಿ ಸಿದ್ಧಪಡಿಸಿದೆ. ಈ ಸ್ವದೇಶಿ ಮಾದರಿಯ ರೈಫಲ್‌ಗೆ ‘ಶೇರ್’ ಎಂದು ಹೆಸರಿಸಲಾಗಿದೆ.
IRRPL has successfully test-fired the first 100% indigenous prototype of AK-203, SHER.
Indian Army to soon get the indigenous guns. pic.twitter.com/99bzeOOS0j
— Akash Sharma (@kaidensharmaa) August 23, 2026
ಏನಿದರ ವಿಶೇಷತೆ?
ರೈಫಲ್‌ಗೆ ಬಳಸಲಾದ ಪ್ರತಿಯೊಂದು ಬಿಡಿಭಾಗ ಹಾಗೂ ಕಚ್ಚಾ ಸಾಮಗ್ರಿಯನ್ನು ಭಾರತೀಯ ಉದ್ಯಮಗಳಿಂದಲೇ ಸಂಗ್ರಹಿಸಲಾಗಿದೆ. ಇದು ಗ್ಯಾಸ್ ಆಧಾರಿತ 7.62×39 ಮಿಮೀ ಸಾಮರ್ಥ್ಯದ ಅಸಾಲ್ಟ್ ರೈಫಲ್ ಆಗಿದ್ದು, ನಿಮಿಷಕ್ಕೆ 700 ಸುತ್ತು ಗುಂಡು ಹಾರಿಸುವ ಹಾಗೂ 800 ಮೀಟರ್ ವರೆಗಿನ ಗುರಿಯನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲೇ ಪ್ರತಿ 100 ಸೆಕೆಂಡಿಗೆ ಒಂದು ಎಕೆ-203 ರೈಫಲ್ ತಯಾರಿಸುವ ಬೃಹತ್ ಉತ್ಪಾದನಾ ಗುರಿಯನ್ನು ಸಂಸ್ಥೆ ಹಾಕಿಕೊಂಡಿದೆ. ಇದನ್ನೂ ಓದಿ: ನಿವೃತ್ತಿ ಬೆನ್ನಲ್ಲೇ ತೇಜಸ್ ಮಾರ್ಕ್-2 ಜೆಟ್ ಕಾರ್ಯಕ್ಷಮತೆ ಟೀಕಿಸಿದ ವಾಯುಪಡೆ ಏರ್ ಮಾರ್ಷಲ್

ಉತ್ಪಾದನಾ ವೇಗ ಹೆಚ್ಚಿರುವುದರಿಂದ ಸೇನೆಗೆ ನಿಗದಿತ ಅವಧಿಗಿಂತ ಸುಮಾರು ಒಂದು ವರ್ಷ ಮುಂಚಿತವಾಗಿಯೇ ಪೂರ್ಣ ಪ್ರಮಾಣದ ರೈಫಲ್‌ಗಳನ್ನು ತಲುಪಿಸಲು ಸಿದ್ಧತೆಗಳು ನಡೆದಿವೆ.
ಭಾರತೀಯ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವ ಸಲುವಾಗಿ ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯ ಕೊರ್ವಾ ಎಂಬಲ್ಲಿ ರೈಫಲ್ ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಮಾರ್ಚ್ 3 ರಂದು ಈ ಫ್ಯಾಕ್ಟರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
In the Shadows, only Steel tells the Truth
Hear The Sher (AK-203) Roar – India’s new signature sound
Atmanirbhar Steel, Crafted in India
Tactical #ASMR pic.twitter.com/HZZA1lK0jv
— ADG PI – INDIAN ARMY (@adgpi) November 23, 2025
ಭಾರತದ ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL) ಮತ್ತು ಮ್ಯುನಿಷನ್ಸ್ ಇಂಡಿಯಾ ಲಿಮಿಟೆಡ್ (MIL) ಶೇ. 50.5 ಪಾಲಮನ್ನು ಹೊಂದಿದ್ದರೆ ರಷ್ಯಾದ ರೊಸೊಬೊರೊನೆಕ್ಸ್ಪೋರ್ಟ್ (Rosoboronexport) ಮತ್ತು ಕಲಾಶ್ನಿಕೋವ್ (Kalashnikov Concern) ಸಂಸ್ಥೆಗಳು ಶೇ.49.5 ಪಾಲನ್ನು ಹೊಂದಿವೆ. ಭಾರತೀಯ ರಕ್ಷಣಾ ಸಚಿವಾಲಯವು ಒಟ್ಟು 6 ಲಕ್ಷಕ್ಕೂ ಅಧಿಕ ರೈಫಲ್‌ಗಳ ಪೂರೈಕೆಗಾಗಿ ಐಆರ್‌ಆರ್‌ಪಿಎಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತು.

