ನವದೆಹಲಿ: ಭಾರತದ ವಾಯುಪಡೆಯ ಗೇಮ್‌ಚೇಂಜರ್ ಅಂತಲೇ ಖ್ಯಾತಿಗಳಿಸಿರುವ ಸ್ವದೇಶಿ ನಿರ್ಮಿತ ತೇಜಸ್ ಎಂಕೆ-2 ಫೈಟರ್ ಜೆಟ್‌ಗಳ ಕಾರ್ಯಕ್ಷಮತೆ, ದಕ್ಷತೆಯನ್ನು ಇತ್ತೀಚೆಗಷ್ಟೇ ವಾಯಪಡೆಯಿಂದ ನಿವೃತ್ತರಾಗಿರುವ ಮಾಜಿ ಉಪಮುಖ್ಯಸ್ಥ ನಾಗೇಶ್ ಕಪೂರ್ ಟೀಕಿಸಿದ್ದಾರೆ.
ಭಾರತದಲ್ಲೇ ತಯಾರಾಗುತ್ತಿರುವ ತೇಜಸ್ ಎಂಕೆ-2 (ಮಾರ್ಕ್-2) ಯುದ್ಧ ಚಿಮಾನವು 2030ರ ದಶಕದ ಮಧ್ಯಭಾಗದಲ್ಲಿ ಗಣ ಸಂಖ್ಯೆಯಲ್ಲಿ ಸೇವೆಗೆ ಸೇರ್ಪಡೆಯಾಗುವ ವೇಳೆಗೆ, ಮುಂಚೂಣಿ ಕಾರ್ಯಾಚರಣೆಗಳಿಗೆ ಪ್ರಸ್ತುತವಾಗದೇ ಇರಬಹುದು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಚೀನಾ ಈಗಾಗಲೇ 6ನೇ ತಲೆಮಾರಿನ ಯುದ್ಧ ವಿಮಾನಗಳತ್ತ ಸಾಗುತ್ತಿದೆ. ಪಾಕಿಸ್ತಾನ ಕೂಡ 5ನೇ ತಲೆಮಾರಿನ ಜೆಟ್‌ಗಳನ್ನ ಹೊಂದುವ ಚಿಂತನೆಯಲ್ಲಿದೆ. ಆದ್ರೆ 2035ರ ವೇಳೆಗೆ ಭಾರಯ 4ನೇ ತಲೆಮಾರಿನ ಯುದ್ಧ ವಿಮಾನಗಳನ್ನ ಹೊಂದುವುದರಲ್ಲಿ ಅರ್ಥವಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹೌದು. ಕಾರ್ಯಾಚರಣೆ ದೃಷ್ಟಿಯಿಂದ ಇದು ಪ್ರಸ್ತುತ ಆಗದೇ ಇರಬಹುದು ಎಂದು ಹೇಳಿದ್ದಾರೆ.

ಭಾರತವು ಪ್ರಸ್ತುತ 5ನೇ ಅಥವಾ 6ನೇ ಪೀಳಿಗೆಯ ಯಾವುದೇ ಜೆಟ್‌ಗಳನ್ನು ಹೊಂದಿಲ್ಲ. ಕೆಲವು ಅಂದಾಜಿನ ಪ್ರಕಾರ, ಚೀನಾ 2030ರ ವೇಳೆಗೆ 5ನೇ ಪೀಳಿಗೆಯ 500 J-20 ಯುದ್ಧ ವಿಮಾನಗಳನ್ನು ಸೇವೆಗೆ ನಿಯೋಜಿಸುವ ಇರಾದೆ ಹೊಂದಿದೆ. ಆದರೆ, ತೇಜಸ್ ಮಾರ್ಕ್-2 ವರ್ಗದ 4ನೇ ಪೀಳಿಗೆಯ ಯುದ್ಧ ವಿಮಾನಗಳು ಪ್ರಮುಖವಲ್ಲದ ಪಾತ್ರ ವಹಿಸಬಹುದು. ನಾವು ನಿರ್ದಿಷ್ಟ ಸಂಖ್ಯೆಯ 5ನೇ ಮತ್ತು 6ನೇ ಪೀಳಿಗೆಯ ಯುದ್ಧ ವಿಮಾನಗಳನ್ನು ಹೊಂದಿರಬಹುದು. ಆದರೆ, ದೇಶದ ಗಾತ್ರವನ್ನು ಪರಿಗಣಿಸಿದರೆ, ಅವುಗಳನ್ನು ಎಲ್ಲೆಡೆ ನಿಯೋಜಿಸಲು ಸಾಧ್ಯವಿಲ್ಲ. ಆದ್ದರಿಂದ ದೇಶದ ಬೇರೆ ಭಾಗಗಳಿಗೆ ತೇಜಸ್ ಮಾರ್ಕ್-2 ವಿಮಾನಗಳನ್ನೇ ನಿಯೋಜಿಸಬೇಕಾಗುತ್ತದೆ ಎಂದಿದ್ದಾರೆ.
ಅಮೆರಿಕ F-22 ಅಥವಾ ಚೀನಾದ ಜೆ-20 ನಂತಹ 5ನೇ ತಲೆಮಾರಿನ ಯುದ್ಧ ವಿಮಾನಗಳು ರೇಡಾರ್‌ಗೆ ಸುಲಭವಾಗಿ ಸಿಗದೇ ಗುರಿ ತಲುಪುವ ಸ್ಟೆಲ್ತ್ ತಂತ್ರಜ್ಞಾನ ಸೆನ್ಸಾರ್ ವ್ಯವಸ್ಥೆ ಮತ್ತು ಆಂತರಿಕ ಆಯುಧ ಸಂಗ್ರಹಣಾ ಸಾಮರ್ಥ್ಯ ಒಳಗೊಂಡಿರುತ್ತವೆ. ಚೀನಾದ ಜೆ-36 ಹಾಗೂ ಜೆ-50 ಅಂತಹ 6ನೇ ತಲೆಮಾರಿನ ಜೆಟ್‌ಗಳೂ ಸ್ಟೆಲ್ತ್ ತಂತ್ರಜ್ಞಾನದ ಮೇಲೆ ನಿರ್ಮಾಣ ಗೊಂಡಿವೆ. ಡ್ರೋನ್ ವಿಂಗ್‌ಮೆನ್‌ಗಳೊಂದಿಗೆ ಎಐ ಚಾಲಿನ ಸ್ವಾಯತ್ತತೆ ಹೊಂದಿರುತ್ತವೆ. ಈ ವಿಮಾನಗಳು ನೆಟ್‌ವರ್ಕ್ ನೋಡ್ ಆಗಿ ಕಾರ್ಯ ನಿರ್ವಹಿಸುವ ʻಸಿಸ್ಟಮ್ ಆಫ್ ಸಿಸ್ಟಮ್ಸ್ʼ ವಿಧಾನ ಒಳಗೊಂಡಿರುತ್ತವೆ ಎಂದೂ ಕೂಡ ಕಪೂರ್ ಹೇಳಿದ್ದಾರೆ.

