Tuesday, 16th July 2019

ಟಿವಿಗೆ ಲಗ್ಗೆ ಇಟ್ಟ ‘ಕೆಜಿಎಫ್’

ಬೆಂಗಳೂರು: ಭಾರತದಾದ್ಯಂತ ಹವಾ ಎಬ್ಬಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ರಿಲೀಸ್ ಆಗಿ ಬಹುತೇಕ ಎರಡು ತಿಂಗಳು ಆಗಿದೆ. ಆದರೂ ಇದರ ಹವಾ ಇನ್ನೂ ಕಡಿಮೆ ಆಗಿಲ್ಲ. ಇದೀಗ ಈ ಚಿತ್ರ ದೂರದರ್ಶನದಲ್ಲಿ ಪ್ರಸಾರವಾಗಲು ಸಜ್ಜಾಗುತ್ತಿದೆ.

ಈಗಾಗಲೇ ಕೆಜಿಎಫ್ ಸಿನಿಮಾ ಬಾಲಿವುಡ್ ಕಿರುತೆರೆಯಲ್ಲಿ ಪ್ರಸಾರವಾಗಿದ್ದು, ಕನ್ನಡದಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ಮಾತ್ರ ಪ್ರಸಾರ ಆಗುತ್ತಿತ್ತು. ಈಗ ದುಬಾರಿ ಬೆಲೆಗೆ ಕೆಜಿಎಫ್ ಸಿನಿಮಾವನ್ನು ಖಾಸಗಿ ಚಾನಲ್ ಖರೀದಿಸಿದೆ. ಈ ಮೂಲಕ ಸದ್ಯದಲ್ಲೇ ಕೆಜಿಎಫ್ ಸಿನಿಮಾವನ್ನು ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ.

ಕೆಜಿಎಫ್ ಸಿನಿಮಾದ ಟಿವಿ ಹಕ್ಕನ್ನು ಕಲರ್ಸ್ ಕನ್ನಡ ವಾಹಿನಿ ಖರೀದಿಸಿರುವುದು ಖಚಿತವಾಗಿದ್ದು, ಈಗಾಗಲೇ ವಾಹಿನಿ ಸಿನಿಮಾ ರಿಲೀಸ್ ಪ್ರೋಮೋ ಟೆಲಿಕಾಸ್ಟ್ ಮಾಡುತ್ತಿದೆ. ಈ ಮೂಲಕ ಥಿಯೇಟರ್, ಮೊಬೈಲ್, ಲ್ಯಾಪ್‍ಟಾಪ್ ನಲ್ಲಿ ಸಿನಿಮಾ ನೋಡಿದ್ದೀರಿ. ಈಗ ಮನೆಯಲ್ಲಿಯೇ ಕುಳಿತು ಟಿವಿಯಲ್ಲಿ ವೀಕ್ಷಿಸಬಹುದು.

ಕೆಜಿಎಫ್ ಸಿನಿಮಾ ದೇಶಾದ್ಯಂತ ಪಂಚಭಾಷೆಗಳಲ್ಲಿ ರಿಲೀಸ್ ಆಗಿದ್ದು, ಇನ್ನೂ ರಾಜ್ಯದ ಹಲವು ಚಿತ್ರಮಂದಿರದಲ್ಲಿ ಕೆಜಿಎಫ್ ಪ್ರದರ್ಶನವಾಗುತ್ತಿದೆ. ಒಟ್ಟಾರೆ 200 ಕೋಟಿ ಗಳಿಕೆ ಕಂಡಿದೆ ಎಂದು ಹೇಳಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *