ಕಾರವಾರ: ಕಾಲೇಜಿನಲ್ಲಿ ಮೊಬೈಲ್ ತಂದು ಪಾಠ ಕೇಳುವ ಬದಲು ವಿದ್ಯಾರ್ಥಿಗಳು ಚಾಟ್ ಮಾಡುವುದೇ ಹೆಚ್ಚಾಗಿದೆ. ಇವುಗಳಿಗೆ ಬ್ರೇಕ್ ಹಾಕಲು ಪ್ರಾಂಶುಪಾಲರು ವಿದ್ಯಾರ್ಥಿಗಳ ಮೊಬೈಲ್‍ನನ್ನು ಸುತ್ತಿಗೆಯಿಂದ ಹೊಡೆದು ಹಾಕಿರುವ ಘಟನೆ ಉತ್ತರ ಕನ್ನಡದ ಶಿರಸಿ ನಡೆದಿದೆ.
ಶಿರಸಿ ಎಂಇಎಸ್ ಚೈತನ್ಯ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ವಶಪಡಿಸಿಕೊಂಡ ಮೊಬೈಲ್ ಅನ್ನು ಅವರ ಸಮ್ಮುಖದಲ್ಲೇ ಸುತ್ತಿಗೆಯಿಂದ ಪ್ರಾಂಶುಪಾಲರು ಹೊಡೆದು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಜೊತೆ ಮೊಬೈಲ್ ನಿಂದ ಆಗುವ ಪರಿಣಾಮ ಕುರಿತು ವಿವರಿಸಿದ್ದಾರೆ.
Advertisement
Advertisement
ಮೊಬೈಲ್ ತಂದರೆ ಪಠ್ಯದ ಕಡೆ ಗಮನ ಕೊಡುವುದಕ್ಕಿಂತ ಮೊಬೈಲ್ ನಲ್ಲಿ ಬ್ಯುಸಿ ಇರುತ್ತಾರೆ. ಹಲವಾರು ಬಾರಿ ವಿದ್ಯಾರ್ಥಿಗಳು ಮೊಬೈಲ್ ತಂದು ಅಧ್ಯಾಪಕರ ಕೈಗೆ ಸಿಕ್ಕಿ ಬಿದ್ದು ಬೈಸಿಕೊಂಡಿದ್ದರು. ಮೊಬೈಲ್ ತರುವುದಕ್ಕೆ ನಿಷೇಧ ಹೇರಿದ್ದರೂ ವಿದ್ಯಾರ್ಥಿಗಳು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಕಾಲೇಜಿಗೆ ಮೊಬೈಲ್ ತರುವ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡುವ ಸಂಬಂಧ ಅವರ ಮುಂದೆ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.