ಕಾರವಾರ: ಕೊರೊನಾ ಸೋಂಕಿತರಿಗೆ ನಮ್ಮೂರಿನಲ್ಲಿ ಆಶ್ರಯ ನೀಡಬೇಡಿ ಎಂದು ವಸತಿ ಶಾಲೆಗೆ ಮಂಚ, ಹಾಸಿಗೆಗಳನ್ನು ಕೊಂಡೊಯ್ಯುತ್ತಿದ್ದ ವಾಹನಗಳನ್ನು ತಡೆದು ಸಾರ್ವಜನಿಕರು ಪ್ರತಿಭಟನೆ ನಡೆಸಿರುವ ಘಟನೆ ಕುಮಟಾದಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಹೆಗಡೆಯ ತಣ್ಣೀರಕುಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕೊರೊನಾ ಶಂಕಿತರನ್ನು ತಂದು ಶುಶ್ರೂಷೆ ಮಾಡಲು ತಾಲೂಕು ಆಡಳಿತ ಸಿದ್ಧತೆ ನಡೆಸಿತ್ತು. ಆದರೆ ವಿಷಯ ತಿಳಿದು ಗಾಬರಿಗೊಂಡ ಹೆಗಡೆ ಪಂಚಾಯ್ತಿ ವ್ಯಾಪ್ತಿಯ ನೂರಾರು ಜನರು ವಾಹನಗಳನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
Advertisement
Advertisement
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಸಿಪಿಐ ಪರಮೇಶ್ವರ್ ಗುನಗಾ, ಪಿಎಸ್‍ಐ ಆನಂದ ಮೂರ್ತಿ, ಪಿಎಸ್‍ಐ ಸುಧಾ ಹರಿಕಂತ್ರ ಹಾಗೂ ಸಿಬ್ಬಂದಿ ಬಂದು ಸಾರ್ವಜನಿಕರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೂ ಜನರು ಒಪ್ಪದಿದ್ದಾಗ ಪೊಲೀಸರು ಜನರನ್ನು ಗದರಿಸಿ ಚದುರಿಸಿದರಲ್ಲದೇ ಮಂಚ ಹಾಗೂ ಹಾಸಿಗೆ ಸಾಗಾಟಕ್ಕೆ ಅನುವು ಮಾಡಿಕೊಟ್ಟರು.
Advertisement