ರಾಜ್ಯದಲ್ಲಿ ಮಳೆ ಕೈಕೊಟ್ಟಿದೆ. ಈ ಹಿನ್ನೆಲೆ ತಾಪಮಾನ ಏರಿಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಬೇಸಿಗೆಯಂತಹ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ ನಿನೋ ಎಫೆಕ್ಸ್ನಿಂದ ಮಳೆ ಅಭಾವ ಉಂಟಾಗಿದ್ದು, ಇತ್ತ ತಾಪಮಾನದಲ್ಲಿ ಏರಿಕೆಯಾಗುತ್ತಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 4 ರಿಂದ 5 ಡಿಗ್ರಿ ತಾಪಮಾನ ಏರಿಕೆಯಾಗಲಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ದಾಖಲಾಗುವಂತಹ ಬಿಸಿಲು ಇದೀಗ ಮಳೆಗಾಲದ ಸಮಯದಲ್ಲಿ ದಾಖಲಾಗಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 31-21
ಮಂಗಳೂರು: 30-24
ಶಿವಮೊಗ್ಗ: 29-22
ಬೆಳಗಾವಿ: 27-21
ಮೈಸೂರು: 32-21
ಮಂಡ್ಯ: 33-21
ಮಡಿಕೇರಿ: 28-19
ರಾಮನಗರ: 32-21
ಹಾಸನ: 29-19
ಚಾಮರಾಜನಗರ: 32-21
ಚಿಕ್ಕಬಳ್ಳಾಪುರ: 31-21

ಕೋಲಾರ: 32-22
ತುಮಕೂರು: 31-21
ಉಡುಪಿ: 31-24
ಕಾರವಾರ: 29-26
ಚಿಕ್ಕಮಗಳೂರು: 27-18
ದಾವಣಗೆರೆ: 32-22
ಹುಬ್ಬಳ್ಳಿ: 30-22
ಚಿತ್ರದುರ್ಗ: 32-21
ಹಾವೇರಿ: 31-22
ಬಳ್ಳಾರಿ: 34-24
ಗದಗ: 31-22
ಕೊಪ್ಪಳ: 33-23

ರಾಯಚೂರು: 34-24
ಯಾದಗಿರಿ: 33-25
ವಿಜಯಪುರ: 32-23
ಕಲಬುರಗಿ: 33-24
ಬಾಗಲಕೋಟೆ: 33-23
