– ಐಸ್‍ಕ್ರೀಂ, ಜ್ಯೂಸ್, ಪುಸ್ತಕ ಮಾರಾಟಕ್ಕೆ ಗ್ರೀನ್ ಸಿಗ್ನಲ್
ಬೆಂಗಳೂರು: ಕೇಂದ್ರ ಸರ್ಕಾರದ ಬುಧವಾರ ನೀಡಿದ್ದ ಮಾರ್ಗಸೂಚಿಗಳ ಅನ್ವಯ ಒಂದಿಷ್ಟು ಕೊರೊನಾ ಲಾಕ್‍ಡೌನ್ ನಿಯಮಗಳನ್ನು ಸಡಿಲ ಮಾಡಿದ್ದ ರಾಜ್ಯ ಸರ್ಕಾರ, ಇವತ್ತು ಇನ್ನೊಂದಿಷ್ಟು ವಿನಾಯಿತಿ ನೀಡಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.
ಬೆಂಗಳೂರು ಸೇರಿದಂತೆ ನಗರ ಹಲವು ನಗರಗಳಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಆಗದಿದ್ದರೂ ರಾಜ್ಯ ಸರ್ಕಾರ ರಿಸ್ಕ್ ತೆಗೆದುಕೊಂಡಂತೆ ಕಾಣುತ್ತಿದೆ. ಮೊಬೈಲ್ ಅಂಗಡಿ, ಜ್ಯೂಸ್ ಅಂಗಡಿ, ಕಟ್ಟಡ ನಿರ್ಮಾಣ ಹೀಗೆ ಹಲವುಗಳಿಗೆ ಮಹಾನಗರ, ನಗರಸಭೆಗಳ ವ್ಯಾಪ್ತಿಯಲ್ಲಿ ಷರತ್ತುಬದ್ಧ ಅನುಮತಿ ನೀಡಿದೆ.
Advertisement
Advertisement
ಬೆಂಗಳೂರು ಸೇರಿದಂತೆ ಮಹಾನಗರ, ನಗರಸಭೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬುಧವಾರ ಅವಕಾಶ ನೀಡಿರಲಿಲ್ಲ. ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ನೇತೃತ್ವದ ಸರ್ಕಾರ ಮಣಿದಂತೆ ಕಾಣುತ್ತಿದೆ. ರಾಜ್ಯ ಸರ್ಕಾರ ಇವತ್ತು ನೀಡಿರುವ ಲಾಕ್‍ಡೌನ್ ವಿನಾಯ್ತಿಗಳನ್ನು ಘೋಷಿಸಿದೆ.
Advertisement
ಲಾಕ್‍ಡೌನ್‍ನಿಂದ ಮತ್ತಷ್ಟು ವಿನಾಯ್ತಿ..!
* ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ
* ಕಾರ್ಮಿಕರು ಸೈಟ್‍ನಲ್ಲಿಯೇ ಇರಬೇಕು (ಕಾರ್ಮಿಕರಿಗೆ ಅಲ್ಲಿಯೇ ಉಳಿದುಕೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸಬೇಕು, ಹೊರಗಿನಿಂದ ಕಾರ್ಮಿಕರನ್ನು ಕರೆಸುವಂತಿಲ್ಲ)
* ನೀರು ಪೂರೈಕೆ ಮತ್ತು ಒಳಚರಂಡಿ ರಿಪೇರಿ
* ಟೆಲಿಕಾಮ್, ಕೇಬಲ್ ಸಂಬಂಧಿ ಕೆಲಸಗಳು
Advertisement
* ಬ್ಯಾಂಕೇತರ ಹಣಕಾಸು ಸಂಸ್ಥೆಗಳು
* ಸಹಕಾರ ಬ್ಯಾಂಕ್/ಸೊಸೈಟಿಗಳು
* ಸ್ಟೇಷನರಿ ಮತ್ತು ಬುಕ್ ಶಾಪ್
* ಎಲೆಕ್ಟ್ರಿಕ್ ಅಂಗಡಿ (ಫ್ಯಾನ್ ಮಾರಲು ಅವಕಾಶ)
* ನಗರ ಪ್ರದೇಶದಲ್ಲಿ ಆಹಾರ ಸಂಸ್ಕರಣೆ ಘಟಕ (ಬ್ರೆಡ್, ಹಾಲು, ಬೇಳೆ, ಫ್ಲೋರ್‍ಮಿಲ್)
* ಪ್ರಿಪೇಡ್ ಮೊಬೈಲ್ ರಿಚಾರ್ಜ್‍ಗೆ ಅಂಗಡಿ
* ಐಸ್ ಕ್ರರೀಂ, ಡ್ರೈ ಫ್ರೂಟ್ಸ್, ಜ್ಯೂಸ್ ಅಂಗಡಿ (ಪಾರ್ಸಲ್‍ಗಷ್ಟೇ ಅವಕಾಶ)
* ಹಿರಿಯ ನಾಗರಿಕರು ಇರುವ ಮನೆಗಳಿಗೆ ಸಹಾಯಕಿಯರು