ಸ್ಟಾಕ್‌ಹೋಮ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಐದು ರಾಷ್ಟ್ರಗಳ ಪ್ರವಾಸದ ಮೂರನೇ ಹಂತವಾಗಿ ಇಂದು(ಮೇ 17) ಸ್ವೀಡನ್‌ನ ಗೊಟೆನ್‌ಬರ್ಗ್‌ಗೆ (Gothenburg) ತಲುಪಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸ್ವೀಡನ್ (Sweden) ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ (Ulf Kristersson) ಅವರು ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. 2018ರ ನಂತರ ಪ್ರಧಾನಿ ಮೋದಿ ಅವರು ಸ್ವೀಡನ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
The warmth and affection of the Indian community in Gothenburg were truly heartening. Their deep connection with India and their contribution to strengthening India-Sweden ties make us all very proud. pic.twitter.com/6JVLRZNAwx
— Narendra Modi (@narendramodi) May 17, 2026
ಗೊಟೆನ್‌ಬರ್ಗ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ವಲಸಿಗರು ಪ್ರಧಾನಿಯವರನ್ನು ಸಾಂಪ್ರದಾಯಿಕ ಭರತನಾಟ್ಯ, ಬಂಗಾಳಿ ಕಲಾ ಪ್ರದರ್ಶನದೊಂದಿಗೆ ಸ್ವಾಗತಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರ ನಡುವೆ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಬಲಪಡಿಸಲು ನಿಯೋಗ ಮಟ್ಟದ ಮಾತುಕತೆಗಳು ನಡೆಯಲಿವೆ.
A mesmerizing Bharatanatyam performance by the talented students of Lilla Akademien…glad that Indian culture is kept alive and is being popularised by our diaspora in Sweden.@SwedishPM pic.twitter.com/8CQGjIeUWV
— Narendra Modi (@narendramodi) May 17, 2026
ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರವನ್ನು ಉತ್ತೇಜಿಸಲು ಯುರೋಪಿನ ಪ್ರಮುಖ ಸಿಇಒಗಳೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಹಸಿರು ಇಂಧನ ಪರಿವರ್ತನೆ (Green Transition), ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್, ಸೆಮಿಕಂಡಕ್ಟರ್, 6G ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಯೋಗದ ಕುರಿತು ಚರ್ಚೆಗಳು ನಡೆಯಲಿವೆ.

