ಇಂದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಸ್ವಲ್ಪ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ನಂತರ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ರಾಜ್ಯಾದ್ಯಂತ ಅಲ್ಲಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ.
ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೋಲಾರ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನೂ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ 32 ಹಾಗೂ ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 32-25
ಶಿವಮೊಗ್ಗ: 31-21
ಬೆಳಗಾವಿ: 29-18
ಮೈಸೂರು: 28-19
ಮಂಡ್ಯ: 28-20
ಮಡಿಕೇರಿ: 27-17
ರಾಮನಗರ: 27-16
ಹಾಸನ: 27-19
ಚಾಮರಾಜನಗರ: 28-19
ಚಿಕ್ಕಬಳ್ಳಾಪುರ: 25-17
ಕೋಲಾರ: 26-18
ತುಮಕೂರು: 27-19
ಉಡುಪಿ: 32-25
ಕಾರವಾರ: 33-26
ಚಿಕ್ಕಮಗಳೂರು: 27-18
ದಾವಣಗೆರೆ: 31-21
ಚಿತ್ರದುರ್ಗ: 29-20
ಹಾವೇರಿ: 31-21
ಬಳ್ಳಾರಿ: 31-21
ಗದಗ: 31-19
ಕೊಪ್ಪಳ: 30-20
ರಾಯಚೂರು: 32-19
ಯಾದಗಿರಿ: 31-18
ವಿಜಯಪುರ: 31-18
ಬೀದರ್: 29-18
ಕಲಬುರಗಿ: 31-17
ಬಾಗಲಕೋಟೆ: 32-19