ಬೆಂಗಳೂರು: ಇಲ್ಲಿನ ಗಾಯತ್ರಿ ವಿಹಾರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ `ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ ಸೀಸನ್-3’ಗೆ (Karnataka Softball Premier League Season-3) ಖ್ಯಾತ ಚಿತ್ರ ನಟ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ನಟಿ ಐಂದ್ರಿತಾ ರೇ (Aindrita Ray) ಮತ್ತು ದಿಗ್ಗಜರು ಚಾಲನೆ ನೀಡಿದರು.
ಡಾರ್ಲಿಂಗ್ ಕೃಷ್ಣ ಮಾತನಾಡಿ, ಕ್ರಿಕೆಟ್ ಎಲ್ಲರ ಅಚ್ಚುಮೆಚ್ಚಿನ ಆಟ. ಉತ್ತಮ ಪ್ರತಿಭೆಗಳನ್ನು ಹುಡುಕಿ ಜಗತ್ತಿಗೆ ತೋರಿಸುವ ಕಾರ್ಯವನ್ನು ಕೆಎಸ್‌ಪಿಎಲ್ ತಂಡ ಕೈಗೊಂಡಿರುವುದು ಶ್ಲಾಘನೀಯ ಎಂದರು. ನಾನು ಮ್ಯಾಚ್ ಆಡಿದ್ದೆ. ಸಾಫ್ಟ್ ಬಾಲ್ ಸಾಫ್ಟ್ ಆಗಿ ಇರುತ್ತೇ ಅಂದುಕೊಂಡಿದ್ದೆ. ಆದರೆ, ಹೇಳುವುದಕ್ಕೆ ಮಾತ್ರ ಸಾಫ್ಟ್ ಬಾಲ್. ಅದು ಕೂಡ ಸಿಕ್ಕಾಪಟ್ಟೆ ಹಾರ್ಡ್ ಆಗಿರುತ್ತೆ ಎಂದು ಆಡಿದ ಮೇಲೆ ಅನುಭವವಾಯಿತು, ಲೆದರ್ ಬಾಲ್‌ನ ಆಟಕ್ಕೂ ಸಾಫ್ಟ್ ಬಾಲ್ ಆಟಕ್ಕೂ ಬಹಳ ವ್ಯತ್ಯಾಸ ಇರುತ್ತದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು. ಇದನ್ನೂ ಓದಿ: ವಾರ್ಡರ್ ಮೇಲೆ ಕೈದಿಗಳಿಂದ ಹಲ್ಲೆ| ಪೂರ್ಣ ಮಾಹಿತಿ ಇನ್ನೂ ಬಂದಿಲ್ಲ, ಕಾರಣ ತಿಳ್ಕೊಂಡು ಕ್ರಮ: ಪ್ರಿಯಾಂಕ್ ಖರ್ಗೆ

ನಟಿ ಐಂದ್ರಿತಾ ರೇ ಮಾತನಾಡಿ, ಕ್ರಿಕೆಟ್‌ಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭಾವಂತರಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುವುದು ಮುಖ್ಯ. ಅಂತಹ ಅವಕಾಶ ಒದಗಿಸಿರುವ ಕೆಎಸ್‌ಪಿಎಲ್ ತಂಡದ ಕಾರ್ಯ ಶ್ಲಾಘನೀಯ ಎಂದರು. ಇದನ್ನೂ ಓದಿ: ನೆಲಮಂಗಲ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ – 10 ಕಿ.ಮೀ. ವಾಹನಗಳ ಸಾಲು
ಸಮಾರಂಭದಲ್ಲಿ ಲೀಗ್ ಪಂದ್ಯದಲ್ಲಿ ಆಡಲಿರುವ 32 ತಂಡಗಳು ಭಾಗವಹಿಸಿದ್ದವು. ಒಟ್ಟು 63 ಪಂದ್ಯಗಳು ನಡೆಯಲಿವೆ. ಇದನ್ನೂ ಓದಿ: ಇಬ್ಬರೇ ಮಕ್ಕಳಿಗಾಗಿ ಕಾಡಿನ ದುರ್ಗಮ ದಾರಿಯಲ್ಲಿ ನಡೆದು 13 ವರ್ಷ ಪಾಠ – ಶಿಕ್ಷಕನ ಸಾಹಸಮಯಗಾಥೆ!

ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಕರ್ನಾಟಕ ಸಾಫ್ಟ್ ಪ್ರಿಮಿಯರ್ ಲೀಗ್ ಅಧ್ಯಕ್ಷ ಸಿದ್ದರಾಮ್ ದೇಸಾಯಿ, ಸಾಫ್ಟ್ ಬಾಲ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥ ಡಾ. ಗಂಗಾಧರ್ ರಾಜು, ಖ್ಯಾತ ನಿರ್ದೇಶಕ ಎಸ್.ನಾರಾಯಣ್, ಖ್ಯಾತ ನಟ ರವಿಚೇತನ್ ಉಪಸ್ಥಿತರಿದ್ದರು. ಇದನ್ನೂ ಓದಿ: ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್‌ಗೆ ತೆರಳಲು ಮುಂದಾದ ಪತ್ನಿಯ ಹತ್ಯೆ – ಆರೋಪಿ ಅರೆಸ್ಟ್
