ಕಲಬುರಗಿ: ಅವರು, ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಸಿಬ್ಬಂದಿ ಮೇಲೆ ಕೈದಿಗಳು ಹಲ್ಲೆ ನಡೆಸಿರುವ ಘಟನೆ ಕುರಿತು ಸಂಪೂರ್ಣ ಮಾಹಿತಿ ಇನ್ನೂ ಬಂದಿಲ್ಲ. ಹಲ್ಲೆಗೆ ಕಾರಣವೇನು ಎಂಬುದನ್ನು ತಿಳಿದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ (Kalaburagi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೈದಿಗಳಿಗೆ ಕಾಲಕಾಲಕ್ಕೆ ಕೌನ್ಸೆಲಿಂಗ್ ನೀಡಲಾಗುತ್ತಿದೆ. ಕೆಲವೊಮ್ಮೆ ಅವರ ಮಾನಸಿಕ ಸ್ಥಿತಿ ಸಹಜವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಜಗಳ, ಹಲ್ಲೆಯಂತಹ ಘಟನೆಗಳು ನಡೆಯುತ್ತವೆ. ಕೈದಿಗಳು ಕೇಳಿದ್ದನ್ನು ನೀಡದಿದ್ದಾಗಲೂ ಈ ರೀತಿ ವರ್ತಿಸುವ ಸಾಧ್ಯತೆಯಿದೆ. ಹೀಗಾಗಿ ಜೈಲು ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಇದನ್ನೂ ಓದಿ: ನೆಲಮಂಗಲ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ – 10 ಕಿ.ಮೀ. ವಾಹನಗಳ ಸಾಲು
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದೆ. ನಾನು ಜೈಲಿಗೆ ಹೋಗುತ್ತೆನೆ ಅಂತಾ ರಾಮುಲು ಅವರು ಹೇಳುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರು ನಮ್ಮಗೆ ಜೈಲಿಗೆ ಕಳುಹಿಸುತ್ತಾರಾ? ರಾಮುಲು ಅವರು ಮೊದಲು ಕನ್ನಡ ನೆಟ್ಟಗೆ ಮಾತನಾಡುವದನ್ನು ಕಲಿಯಲಿ. ಬರ ಘೋಷಣೆ ಮಾಡಬೇಕಾದರೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡದ ಪ್ರಕಾರವೇ ಮಾಡಬೇಕು. ಆದರೆ ಇದನ್ನು ಬಿಟ್ಟು ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ಹೆಸರಿನಲ್ಲಿ ಗುಂಡಾಗಿರಿ ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಇಬ್ಬರೇ ಮಕ್ಕಳಿಗಾಗಿ ಕಾಡಿನ ದುರ್ಗಮ ದಾರಿಯಲ್ಲಿ ನಡೆದು 13 ವರ್ಷ ಪಾಠ – ಶಿಕ್ಷಕನ ಸಾಹಸಮಯಗಾಥೆ!
