ಬೆಂಗಳೂರು: ವಾರಾಂತ್ಯ ಹಾಗೂ ಕಡೆ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ಬೆಂಗಳೂರು-ನೆಲಮಂಗಲ(Bengaluru-Nelamangla) ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ(Traffic Jam) ಮಿತಿಮೀರಿದ್ದು, ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ತಮ್ಮ ಊರುಗಳತ್ತ ತೆರಳಲು ಜನ ಮುಗಿಬಿದ್ದ ಪರಿಣಾಮ ನೆಲಮಂಗಲದಿಂದ ಬೆಂಗಳೂರಿನ 8ನೇ ಮೈಲಿವರೆಗೆ ಬರೋಬ್ಬರಿ 10 ಕಿಲೋಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ.

ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲದಿಂದ ವಾಹನಗಳು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದು, ಹೆದ್ದಾರಿಯ ಮೂರೂ ಪಥಗಳಲ್ಲೂ ವಾಹನಗಳು ಆಮೆಗತಿಯಲ್ಲಿ ಸಾಗುತ್ತಿವೆ. ಇದನ್ನೂ ಓದಿ: ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್‌ಗೆ ತೆರಳಲು ಮುಂದಾದ ಪತ್ನಿಯ ಹತ್ಯೆ – ಆರೋಪಿ ಅರೆಸ್ಟ್
ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ವಾಹನ ಚಾಲಕರು ಮತ್ತು ಸವಾರರು ಹೈರಾಣಾಗಿದ್ದು, ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
