ಬೆಂಗಳೂರು: ಆಹಾರ ಸುರಕ್ಷತಾ ಇಲಾಖೆ ದಾಳಿ ವೇಳೆ ಕರ್ನಾಟಕ ಕ್ರಿಕೆಟ್ ಅಕಾಡೆಮಿ ಕ್ಲಬ್ ಕರ್ಮಕಾಂಡ ಬಯಲಾಗಿದೆ.
ಅಧಿಕಾರಿಗಳ ತಪಾಸಣೆಯಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಬಯಲಾಗಿದೆ. ಫುಡ್ ಹ್ಯಾಂಡ್ಲರ್‌ಗಳ ಸ್ವಚ್ಛತೆ ಇಲ್ಲದೇ ಇರೋದು ಕಂಡುಬಂದಿದೆ. ಕ್ಲಬ್ ಕಿಚನ್‌ನಲ್ಲಿ ಪ್ಲಾಸ್ಟಿಕ್ ಕಟಿಂಗ್ ಬೋರ್ಡ್ ಬಳಕೆ ಮಾಡಲಾಗಿದೆ. ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಯಾಗಿದೆ.
ಡ್ರೈನೇಜ್ ಬ್ಲಾಕ್ ಆಗಿದ್ದು, ಅಶುಚಿತ್ವದ ವಾತಾವರಣ ಕಂಡುಬಂದಿದೆ. ಕಿಚನ್‌ನಲ್ಲಿ ಒಳಚರಂಡಿ ಬ್ಲಾಕ್ ಆಗಿ ಕೊಳಕು ಇದೆ. ತೊಗರಿಬೇಳೆಯಲ್ಲಿ ಲೇಬಲ್ ಉಲ್ಲಂಘನೆಯಾಗಿದೆ. ಪ್ಯಾಕಿಂಗ್ ಡೇಟ್ ಇಲ್ಲ, ಬ್ಯಾಚ್ ನಂಬರ್ ಇಲ್ಲ, MRP ಇಲ್ಲ. ಹೆಪ್ಪುಗಟ್ಟಿದ ಆಹಾರ ಸಂಗ್ರಹ ಕೊಠಡಿ ಅಶುಚಿಯಾಗಿದೆ. ವೆಜ್ ಮತ್ತು ನಾನ್-ವೆಜ್ ಒಟ್ಟಿಗೆ ಸಂಗ್ರಹ ಮಾಡಲಾಗಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಪ್ರತ್ಯೇಕವಾಗಿ ಸಂಗ್ರಹಿಸಿಲ್ಲ.
ಕಿಲಾಪಿಯಾ ಮೀನಿನಲ್ಲಿ ಲೇಬಲ್ ವಿವರ ಇಲ್ಲ. ಮೂಲ, ದಿನಾಂಕ ಇಲ್ಲದ ಮೀನು ಸಂಗ್ರಹ ಮಾಡಲಾಗಿತ್ತು. ಪಾತ್ರೆ ತೊಳೆಯುವ ಜಾಗದಲ್ಲಿ ಬಿಸಿ ನೀರು ಇಲ್ಲ. ಪಾತ್ರೆ ಸ್ವಚ್ಛಗೊಳಿಸುವ ಪ್ರದೇಶದಲ್ಲಿ ಅಶುಚಿತ್ವ ಇತ್ತು. ಬೌರಿಂಗ್ ಇನ್ಸ್ಟಿಟ್ಯೂಟ್ ಕಿಚನ್‌ನಲ್ಲಿ ಜಿರಳೆಗಳ ಹಾವಳಿ ಹೆಚ್ಚಾಗಿದೆ. ಆಹಾರ ಪದಾರ್ಥಗಳಲ್ಲಿ ಜಿರಳೆಗಳು ಕಂಡುಬಂದಿವೆ.
ಕೊಳೆತ ಈರುಳ್ಳಿ ಮತ್ತು ಶುಂಠಿ ಬಳಕೆ ಮಾಡಿರೋದು ಬಯಲಾಗಿದೆ. ನೈರ್ಮಲ್ಯ ಮತ್ತು ಸ್ವಚ್ಛತೆ ಇಲ್ಲ. ಆಹಾರ ಪದಾರ್ಥಗಳಲ್ಲಿ ಜಿರಳೆಗಳ ಓಡಾಟ ಹೆಚ್ಚಾಗಿತ್ತು.
